ನ್ಯೂಸ್

ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ.ಕೆ ನಾಗರಾಜ್ ಘೋಷಣೆ / ಸಮಾಜದ ಸ್ವಾಸ್ಥ್ಯದ ಜೊತೆಗೆ ಶಿಕ್ಷಣ ಆರೋಗ್ಯಕ್ಕೆ ಅಧ್ಯತೆ / ಮಹಿಮಾ ಜೆ ಪಾಟೀಲ್,

ವಿಜಯವಾಣಿ ಸುದ್ದಿಜಾಲ ಕೋಲಾರ

ಸಮಾಜದ ಸ್ವಾಸ್ಥ್ಯದ ಜೊತೆಗೆ ಆರೋಗ್ಯ ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ಕೈಜೋಡಿಸುವ ಸಮಾನಮನಸ್ಕರ ಜೊತೆಯಲ್ಲಿ ಜೆಡಿಯು ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವುದಾಗಿ ಪಕ್ಷದ ರಾಜ್ಯ ಅಧ್ಯಕ್ಷ ಮಹಿಮಾ ಜೆ ಪಾಟೀಲ್ ತಿಳಿಸಿದರು,

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇವತ್ತೀಚಿನ ದಿನಗಳಲ್ಲಿ ರಾಜಕಾರಣವು ದಂಧೆಯಾಗಿದೆ. ಕೇವಲ ವ್ಯಾಪಾರದ ಮನಸ್ಥಿತಿಯಾಗಿ ಬಿಟ್ಟಿದೆ. ಜನರ ಸಮಸ್ಯೆಗಳಿಗೆ ಒತ್ತು ನೀಡುತ್ತಿಲ್ಲ. ಜೆಡಿಯು ಪಕ್ಷವು ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ ಸೇರಿದಂತೆ ಆಡಳಿತ ವ್ಯವಸ್ಥೆಯ ಸುಧಾರಣೆಗೆ ಅಧ್ಯತೆ ನೀಡಲಾಗುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಬಗ್ಗೆ ಆರೋಪ ಪ್ರತ್ಯಾರೋಪಕ್ಕೆ ಸೀಮಿತವಾಗಬಾರದು. ರಾಜ್ಯದಾದ್ಯಂತ ಮಠಾಧೀಶರು, ಪದವೀಧರರು, ಪ್ರಗತಿಪರ ಚಿಂತಕರು, ಸಾಹಿತಿಗಳೊಂದಿಗೆ ಸಂವಹನದ ಮೂಲಕ ರಾಜಕಾರಣವನ್ನು ಬದಲಾವಣೆ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಮುಂದಿನ ೨೦೨೬ ರ ಜೂನ್ ನಲ್ಲಿ ನಡೆಯಲಿರುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಕಲ್ಲಂಡೂರು ಗ್ರಾಮದ ಡಾ.ಕೆ.ನಾಗರಾಜ್ ಅವರನ್ನು ಜೆಡಿಯು ಪಕ್ಷದಿಂದ ಕಣಕ್ಕಿಳಿಸುತ್ತಿದ್ದು ವ್ಯವಸ್ಥೆಯಲ್ಲಿನ ಪರಿವರ್ತನೆಗಾಗಿ ಪದವೀಧರರು ಸುಶಿಕ್ಷಿತರು ವ್ಯವಸ್ಥೆ ವಿರುದ್ಧ ನಿಂತಿದ್ದಾರೆ. ನಮ್ಮಲ್ಲಿ ಹೊಸ ಆಲೋಚನೆಗಳೊಂದಿಗೆ ಹೊಸ ದಿಕ್ಕಿನಲ್ಲಿ ಸಾಗಲು ಮುಂದಾಗಿದ್ದೇವೆ. ನಮ್ಮನ್ನು ಬೆಂಬಲಿಸುವAತೆ ಮನವಿ ಮಾಡಿದರು.

ಈಗಾಗಲೇ ಕೋಲಾರ ಜಿಲ್ಲೆಯ ಮುಳಬಾಗಿಲು ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇವೆ. ಪರಿವರ್ತನೆಯೂ ಪ್ರಾರಂಭವಾಗಿದೆ. ಈಗ ಸ್ಚರ್ಣಯುಗ ಆರಂಭವಾಗಬೇಕಿದೆ ಮುಂದೆ ರಾಜ್ಯಾದ್ಯಂತ ವ್ಯಾಪಿಸಲು ಸಾಣೇಹಳ್ಳಿಯಿಂದ ಸಂತೆಬೆನ್ನೂರಿನ ವರಗೆ ನಮ್ಮ ನಡಿಗೆ ಸರ್ವೋದಯ ಕಡೆಗೆ ಪಾದಯಾತ್ರೆ ನಡೆಯುತ್ತಿದೆ ಅದಕ್ಕೆ ಸಮಾನಮನಸ್ಕಾರು ಬೆಂಬಲಿಸುವAತೆ ಮನವಿ ಮಾಡಿದರು.

ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಯು ಯುವ ಘಟಕದ ರಾಜ್ಯ ಅಧ್ಯಕ್ಷ ಕಲ್ಲಂಡೂರು ಡಾ. ಕೆ ನಾಗರಾಜ್ ಮಾತನಾಡಿ ಚುನಾವಣೆ ಇನ್ನೂ ಒಂದೂವರೆ ವರ್ಷವಿದೆ ಈ ಬಾರಿ ಕನಿಷ್ಠ ಮೂರು ಲಕ್ಷ ಮತದಾರರು ಮತದಾನ ಮಾಡಲಿದ್ದು ಐದು ಜಿಲ್ಲೆಯ ಪದವೀಧರ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಪಕ್ಷ ಚುನಾವಣೆಗೆ ಮಾತ್ರ ಸೀಮಿತವಲ್ಲ ಜನರ ಬಳಿ ಹೋಗಿ ಮನದಟ್ಟು ಮಾಡುತ್ತೇವೆ ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಬೇಕು ಮತದಾರರ ನೋಂದಣಿ ಹೆಚ್ಚಿಸಬೇಕು ಕೋಲಾರದಿಂದ ಆರಂಭ ಮಾಡಿದ್ದೇವೆ ಎಂದರು.

ಕರ್ನಾಟಕ ರಾಷ್ಟ್ರ ಸಮಿತಿ ಕೆ.ಆರ್.ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದಿರಾ ಮಾತನಾಡಿ ಪಕ್ಷವು ಡಾ. ನಾಗರಾಜ್ ಅವರಿಗೆ ಬೆಂಬಲ ಸೂಚನೆ ನೀಡಿದ್ದೇವೆ. ರಾಜ್ಯದಲ್ಲಿ ರಾಜಕೀಯ ಬದಲಾವಣೆಗಾಗಿ ಹೋರಾಟ ಮಾಡುತ್ತಿದ್ದು ಬದಲಾವಣೆಯೇ ನಮ್ಮ ಗುರಿಯಾಗಿದೆ ಬದಲಾವಣೆ ಅಗುತ್ತದೆ ಎಂಬ ನಂಬಿಕೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಯು ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀನಿವಾಸಗೌಡ, ಮಹಿಳಾ ಘಟಕದ ಸಂಚಾಲಕಿ ಕಲಾವತಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಲಾವತಿ, ಲಕ್ಷ್ಮೀ, ಯಶೋಧಾ, ಉಪಾಧ್ಯಕ್ಷ ಪ್ರಭು, ದಾವಣಗೆರೆ ಇಮ್ತಿಯಾಜ್, ಕೆ.ಆರ್.ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ ಮಹೇಶ್, ಮುಂತಾದವರು ಇದ್ದರು.

ಚಿತ್ರ ೨೨ ಕೆ.ಎಲ್.ಆರ್. ೦೨ : ನಗರದ ಪತ್ರಕರ್ತರ ಭವನದಲ್ಲಿ ಜೆಡಿಯು ಪಕ್ಷದ ಮಾಜಿ ಅಧ್ಯಕ್ಷ ಮಹಿಮಾ ಜೆ.ಪಾಟೀಲ್ ಮಾತನಾಡುತ್ತಿರುವುದು. ಜೆಡಿಯು ಯುವ ಘಟಕದ ಅಧ್ಯಕ್ಷ ಕಲ್ಲಂಡೂರು ಡಾ.ಕೆ.ನಾಗರಾಜ್, ಕೆ.ಆರ್.ಪಕ್ಷದ ಪ್ರಧಾನ ಕಾರ್ಯದರ್ಶಿ ಇಂದಿರಾ ಮುಂತಾದವರಿದ್ದರು.