ನ್ಯೂಸ್

ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿ / ಜಿಲ್ಲೆಯ ಗಡಿಭಾಗಗಳಲ್ಲಿರುವ ಪೆಟ್ರೋಲ್ ಬಂಕ್‌ಗಳ ಮೂಲಕ ಆಂಧ್ರಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಕಳ್ಳಸಾಗಾಣಿಕೆ / ಮೌನವಹಿಸಿರುವ ಜಿಲ್ಲಾಡಳಿತ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಜಿಲ್ಲೆಯಿಂದ ಆಂಧ್ರಪ್ರದೇಶ ಗಡಿ ಭಾಗಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ಕಳ್ಳಸಾಗಾಣಿಕೆಯಾಗುತ್ತಿದ್ದು, ಪೋಲಿಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಆಯಿಲ್ ಕಾರ್ಪೋರೇಷನ್ ಇಲಾಖೆಗಳವರು ಮೂಖ ಪ್ರೇಕ್ಷಕರಾಗಿದ್ದಾರೆ.

ಕೋಲಾರ ಜಿಲ್ಲೆಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಿಂತ ಆಂಧ್ರಪ್ರದೇಶದಲ್ಲಿ ಲೀಟರ್ ಒಂದಕ್ಕೆ ೯ ರಿಂದ ೧೦ ರೂ.ಗಳ ವ್ಯತ್ಯಾಸ ಕಂಡುಬರುತ್ತಿದೆ. ಆಂಧ್ರದಿAದ ಕರ್ನಾಟಕಕ್ಕೆ ಪ್ರತಿದಿನ ಬರುವ ಬಸ್ಸು ಮತ್ತು ವಾಹನಗಳಿಗೆ ಕರ್ನಾಟಕದ ಗಡಿಭಾಗದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿಯೇ ಡೀಸೆಲ್ ಮತ್ತು ಪೆಟ್ರೋಲ್ ತುಂಬಿಸಿಕೊಳ್ಳುವ ಕೆಲಸ ಆಗುತ್ತಿದೆ.

ಆಂಧ್ರಪ್ರದೇಶದಿAದ ಕರ್ನಾಟಕ ಪ್ರವೇಶ ಮಾಡದೆ ತಮಿಳುನಾಡು, ಮಹಾರಾಷ್ಟç ಮುಂತಾದ ರಾಜ್ಯಗಳಿಗೆ ಪ್ರತಿದಿನ ಹೋಗುವ ಬಸ್ಸು ಮತ್ತು ಲಾರಿ ಹಾಗೂ ಗುತ್ತಿಗೆ ಕೆಲಸಗಳು ಮಾಡುವ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿರುವ ಪೆಟ್ರೋಲ್ ಬಂಕ್‌ಗಳಿAದ ಕಳ್ಳಸಾಗಾಣಿಕೆಯಾಗುತ್ತಿದೆ.

ಕರ್ನಾಟಕದಿಂದ ಆಂಧ್ರಕ್ಕೆ ಹೋಗುವ ರಾಷ್ಟಿçÃಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಚೆಕ್‌ಪೋಸ್ಟ್ಗಳಿದ್ದರು ಅವುಗಳ ಕಣ್ಣು ತಪ್ಪಿಸಿ ಮಿನಿ ಟ್ಯಾಂಕರ್‌ಗಳ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಸಾಗಾಣಿಕೆಯಾಗುತ್ತಿದೆಯಂತೆ.

ರಸ್ತೆ, ಸೇತುವೆ ಮುಂತಾದ ದೊಡ್ಡ ದೊಡ್ಡ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರ ವಾಹನಗಳಿಗೆ ಪೆಟ್ರೋಲ್ ಬಂಕ್ ಮೂಲಕವೇ ಡೀಸೆಲ್ ಮತ್ತು ಪೆಟ್ರೋಲ್ ಸಾಗಾಣಿಕೆ ಮಾಡಲು ಆಯಿಲ್ ಕಾರ್ಪೋರೇಷನ್‌ರವರು ಅನುಮತಿಯನ್ನು ನೀಡಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪೆಟ್ರೋಲ್ ಬಂಕ್ ಮಾಲೀಕರು ಅನುಮತಿ ಪಡೆಯದೆಯೇ ಮಿನಿ ಟ್ಯಾಂಕರ್‌ಗಳ ಮೂಲಕ ಆಂಧ್ರಪ್ರದೇಶದ ದೊಡ್ಡ ದೊಡ್ಡ ಗುತ್ತಿಗೆದಾರರ ಕಂಪನಿಗಳ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಸರಬರಾಜು ಮಾಡುವುದು ಮತ್ತು ಬಸ್ಸು, ಲಾರಿ ಮುಂತಾದ ವಾಹನ ಮಾಲೀಕರ ಕಂಪನಿಗಳಿಗೆ ಕಳ್ಳದಾರಿಗಳಲ್ಲಿ ಪೆಟ್ರೋಲ್ ಡೀಸೆಲ್ ಸರಬರಾಜು ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಬೆಲೆ ವ್ಯತ್ಯಾಸ :

ಆಂಧ್ರ ಪ್ರದೇಶದಲ್ಲಿ ಲೀ. ಪೆಟ್ರೋಲ್ ಬೆಲೆ ೧೧೦.೩೪ ಪೈಸೆ, ಡೀಸೆಲ್ ಬೆಲೆ ೯೮.೧೮ ಪೈಸೆ. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಡೀಸೆಲ್ ಲೀ.ಗೆ ೮೯.೨೦ ಪೈಸೆ, ಪೆಟ್ರೋಲ್ ಲೀ.ಗೆ ೧೦೨.೮೫ ಪೈಸೆ ಆಗಿದೆ.

ಆಂಧ್ರಪ್ರದೇಶದಲ್ಲಿ ಪ್ರೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿರುವ ಕಾರಣ ಅಲ್ಲಿ ಬೆಲೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಕಡಿಮೆ ಇರುವ ಕಾರಣ ಕರ್ನಾಟಕದ ಕೋಲಾರ ಜಿಲ್ಲೆಯ ಗಡಿಭಾಗದಲ್ಲಿರುವ ಪೆಟ್ರೋಲ್ ಬಂಕ್‌ಗಳಿಗೆ ಅಲ್ಲಿನ ವಾಹನ ಸವಾರರು ಮುಗಿಬೀಳುವಂತಾಗಿದೆ. ಪ್ರೆಟ್ರೋಲ್ ಬಂಕ್‌ಗಳಿಗೆ ಅಂತರ ಕಡಿಮೆ ಇರುವಂತಹ ಗ್ರಾಮಗಳವರು ವಾಹನಗಳಲ್ಲಿಯೇ ಬಂದು ಪೆಟ್ರೋಲ್ ಮತ್ತು ಡೀಸೆಲ್‌ನ್ನು ತುಂಬಿಸಿಕೊAಡು ಹೋಗುವ ಕೆಲಸ ಮಾಡುತ್ತಿದ್ದಾರೆ.

ದೂರ ಇರುವ ಕಡೆ ಪೆಟ್ರೋಲ್ ಬಂಕ್ ಮಾಲೀಕರೇ ಮಿನಿ ಟ್ಯಾಂಕರ್‌ಗಳ ಮೂಲಕ ಚೆಕ್‌ಪೋಸ್ಟ್ಗಳ ಕಣ್ಣು ತಪ್ಪಿಸಿ ಅಡ್ಡದಾರಿಗಳಲ್ಲಿ ತೈಲವನ್ನು ಆಂಧ್ರಪ್ರದೇಶಕ್ಕೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ. ಜಿಲ್ಲಾ ಪೋಲಿಸ್ ಆಗಲೀ ಜಿಲ್ಲಾಡಳಿತ ಅಥವಾ ಆಯಿಲ್ ಕಾರ್ಪೋರೇಷನ್ ಇಲಾಖೆಯವರು ಈ ಬಗ್ಗೆ ಗಮನ ಹರಿಸುತ್ತಿಲ್ಲ.

ಆಂಧ್ರ ಪ್ರದೇಶದಲ್ಲಿ ಸಂಬAಧಪಟ್ಟ ಇಲಾಖೆಯವರು ಕರ್ನಾಟಕದಿಂದ ತೈಲ ಸರಬರಾಜು ಆಗದಂತೆ ಕಟ್ಟನಿಟ್ಟಿನ ಕ್ರಮಕ್ಕೆ ಮುಂದಾಗಿ ಚೆಕ್‌ಪೋಸ್ಟ್ಗಳನ್ನು ಬಿಗಿಗೊಳಿಸಿದ್ದರು ಮಿನಿ ನೀರಿನ ಟ್ಯಾಂಕ್ ಅಥವಾ ಆಯಿಲ್ ಟ್ಯಾಂಕ್ ಮಾದರಿಯಲ್ಲಿ ಟ್ಯಾಂಕರ್‌ಗಳನ್ನು ನಿರ್ಮಾಣ ಮಾಡಿಕೊಂಡು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಗಡಿ ಭಾಗದಲ್ಲಿ ವ್ಯಾಪಕವಾಗಿ ಹರಡಿದೆ.

ಇದರಿಂದ ಕರ್ನಾಟಕಕ್ಕೆ ಲಾಭವೇ ಆದರೂ ಆಂಧ್ರಪ್ರದೇಶಕ್ಕೆ ನಷ್ಟ ಉಂಟಾಗುತ್ತಿದೆ. ಪರವಾನಗಿ ಪಡೆಯದೆ ಕಳ್ಳ ಸಾಗಾಣಿಕೆಯಾಗುತ್ತಿರುವುದು ನಿಯಮಗಳನ್ನು ಗಾಳಿಗೆ ತೂರಿದಂತೆ ಆಗಿದೆ.

ಚಿತ್ರ ೨೬ ಕೆ.ಎಲ್.ಆರ್. ೦೧ : ಗಡಿಭಾದಲ್ಲಿರುವ ಪೆಟ್ರೋಲ್ ಬಂಕ್‌ನ ಸಂಗ್ರಹ ಚಿತ್ರ

ಚಿತ್ರ ೨೬ ಕೆ.ಎಲ್.ಆರ್. ೦೧ಎ : ಮಿನಿ ಟ್ಯಾಂಕರ್‌ಗಳ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಸಾಗಾಣಿಕೆ ಮಾಡಲು ತಯಾರು ಮಾಡಿಕೊಂಡಿರುವ ಟ್ಯಾಂಕರ್‌ಗಳು