ವಿಜಯವಾಣಿ ಸುದ್ದಿಜಾಲ ಕೋಲಾರ
ರೈತರ ಬೇಡಿಕೆಯಂತೆ ಮಾವಿಗೆ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಪ್ರಸ್ತಾವನೆ ಪರಿಶೀಲನಾ ಹಂತದಲ್ಲಿದ್ದು, ರೈತರ ಹಿತದೃಷ್ಟಿಯಿಂದ ಮಾವು ಬೆಳೆಗಾರರು ಬುಧವಾರ ಬಂದ್ ಮಾಡಲು ನಿರ್ಧರಿಸಿರುವುದು ಕೈಬಿಡಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಮನವಿ ಮಾಡಿದ್ದಾರೆ.
ಕೋಲಾರ ಜಿಲ್ಲೆ ಮಾವು ಮತ್ತು ಟೊಮೆಟೋ ಬೆಳೆಗಳು ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಮಾವು ಮತ್ತು ಟೊಮೆಟೋ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ಜೂ.೫ ರಂದು ನಡೆದ ಬೆಳೆಗಾರರ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.
ಜಿಲ್ಲೆಯ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮಾವು ಬೆಳೆಗಾರರಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ಬೆಲೆ ದೊರಕಿಸಿಕೊಡಲು ಈಗಾಗಲೇ ಚಿತ್ತೂರು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಮಾವನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಲು ಸಂಬAಧಿಸಿದ ಸಂಸ್ಥೆಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಸೂಚನೆ ನೀಡಲು ಮನವಿ ಮಾಡಲಾಗಿದೆ. ಈ ಸಂಬAಧ ಕೋಲಾರ ಜಿಲ್ಲೆಯ ಅಧಿಕಾರಿಗಳ ನಿಯೋಗವೊಂದನ್ನು ಚಿತ್ತೂರಿಗೆ ಕಳುಹಿಸಿಕೊಡಲಾಗಿದೆ.
ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ೮೦೦ ರಿಂದ ೯೦೦ ಟನ್ ಮಾವು ವಹಿವಾಟು ನಡೆಯುತ್ತಿದ್ದು, ಜೂ.೧೧ ರಂದು ಬುಧವಾರ ಮಾವು ಬೆಳೆಗಾರರು ಬಂದ್‌ಗೆ ಕರೆ ನೀಡಿದ್ದಾರೆ. ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬಂದ್‌ನಿAದ ಮತ್ತಷ್ಟು ಸಂಕಷ್ಟ ತಂದೊಯ್ಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ತಮ್ಮ ನಿರ್ಧಾರವನ್ನು ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಬಾಕ್ಸ್
ಆಂಧ್ರಪ್ರದೇಶದಲ್ಲಿ ಮಾವಿಗೆ ಕೆ.ಜಿ. ಒಂದಕ್ಕೆ ೪ ರೂ.ಗಳ ಪ್ರೋತ್ಸಾಹಧನ ನೀಡುತ್ತಿದ್ದು, ವ್ಯಾಪಾರಸ್ಥರು ಹಾಗೂ ಜೂಸ್ ಫ್ಯಾಕ್ಟರಿಗಳವರು ಮಾವನ್ನು ೧೦ ರೂ.ಗಳಿಗಿಂತ ಕಡಿಮೆ ಖರೀದಿಸಬಾರದೆಂದು ಸೂಚನೆ ನೀಡಿದ್ದು, ಸರ್ಕಾರ ನೀಡುವ ಪ್ರೋತ್ಸಾಹಧನ ಸೇರಿ ರೈತರಿಗೆ ಕೆ.ಜಿ ಒಂದಕ್ಕೆ ೧೦ ರೂ.ಗಳು ಸಿಗುತ್ತಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಕೋಲಾರ ಜಿಲ್ಲೆಗೆ ಹತ್ತಿರವಿರುವ ಕಾರಣ ಚಿತ್ತೂರಿನಲ್ಲಿ ಮಾವು ತಿರುಳು ತೆಗೆಯುವ ಘಟಕಗಳು ಹೆಚ್ಚಾಗಿರುವ ಕಾರಣ ಪ್ರತಿವರ್ಷ ಕೋಲಾರ ಜಿಲ್ಲೆಯಿಂದ ಮಾವನ್ನು ಖರೀದಿಸುತ್ತಿದ್ದರು. ಈ ವರ್ಷ ಮಾವಿಗೆ ಬೆಲೆ ಕುಸಿತ ಕಾರಣ ಹಾಗೂ ಆಂಧ್ರದಲ್ಲಿ ಫಸಲು ಹೆಚ್ಚಾಗಿರುವ ಕಾರಣ ಅಲ್ಲಿನ ಮಾವೇ ಅವರಿಗೆ ಹೆಚ್ಚಾಗಿರುವ ಕಾರಣ ಕೋಲಾರ ಜಿಲ್ಲೆಯ ಮಾವು ಖರೀದಿಸಲು ಮುಂದಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ಮಾವು ಬೆಲೆ ಕುಸಿಯಲು ಕಾರಣವಾಗಿದೆ.
ಜಿಲ್ಲಾಧಿಕಾರಿ ಮನವಿ :
ಆಂಧ್ರಪ್ರದೇಶದಲ್ಲಿ ರೈತರಿಂದ ಖರೀದಿಸುತ್ತಿರುವ ಬೆಲೆಯ ದರದಲ್ಲಿಯೇ ಕೋಲಾರ ಜಿಲ್ಲೆಯ ಮಾವನ್ನು ಖರೀದಿಸುವಂತೆ ಆಂಧ್ರಪ್ರದೇಶದ ಜಿಲ್ಲಾಧಿಕಾರಿಗಳಿಗೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಮನವಿ ಮಾಡಿ ಅಲ್ಲಿ ರೈತರಿಂದ ಖರೀದಿಸುತ್ತಿರುವ ೧೦ ರೂ.ಗಳಂತೆಯೇ ನಮ್ಮ ಮಾವನ್ನು ಖರೀದಿ ಮಾಡಲು ಸೂಚಿಸಿದ್ದಾರೆ. ಆದರೆ ಅಲ್ಲಿನ ಜಿಲ್ಲಾಧಿಕಾರಿಗಳು ಚರ್ಚಿಸಲು ಅವಕಾಶ ಕೋರಿದ್ದಾರೆ.
ಚಿತ್ರ ೧೦ ಕೆ.ಎಲ್.ಆರ್. ೦೩ : ಜಿಲ್ಲಾಧಿಕಾರಿ ಭಾವಚಿತ್ರ