ನ್ಯೂಸ್

ಆ.12ರಂದು ಮೈಸೂರು ಚಲೋ, ಜಾಗೃತಿ ರ‌್ಯಾಲಿ, ಸಾರ್ವಜನಿಕ ಸಭೆ

ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ದಕ್ಷಿಣ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆ.12ರಂದು ಮೈಸೂರು ಚಲೋ, ಜಾಗೃತಿ ರ‌್ಯಾಲಿ, ಸಾರ್ವಜನಿಕ ಸಭೆ ಆಯೋಜಿಸಿದೆ ಎಂದು ರಾಜ್ಯ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ತಿಳಿಸಿದರು.

ಅಂದು ಬೆಳಗ್ಗೆ 10.30ಕ್ಕೆ ರ‌್ಯಾಲಿ ವಸ್ತು ಪ್ರದರ್ಶನ ಮೈದಾನದ ಪಾಕಿರ್ಂಗ್ ಸ್ಥಳದಿಂದ ಹೊರಟು, ಹಾಡಿರ್ಂಜ್ ವೃತ್ತ ಮಾರ್ಗವಾಗಿ, ಕೋಟೆ ಆಂಜನೇಯ ಸ್ವಾಮಿ ರಸ್ತೆಯಲ್ಲಿ ಸಾಗಿ, ಗಾಂಧಿ ವೃತ್ತ ತಲುಪಿ, ಅಲ್ಲಿಯೇ ಸಾರ್ವಜನಿಕ ಸಭೆ ನಡೆಸಲಾಗುವುದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ತಯಾರಿಕ ಘಟಕ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ಎನ್‌ಡಿಪಿಎಸ್ ಮತ್ತು ಕೋಪ್ಪಾ ಕಾಯ್ದೆಗಳನ್ನು ಬಲಪಡಿಸುವಲ್ಲಿ ಪ್ರಮುಖ ತಿದ್ದುಪಡಿಗಳನ್ನು ಮಾಡಬೇಕು ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ವಸಂತ,ಸಂಜಿತ್, ಪ್ರಜ್ವಲ್ ಉಪಸ್ಥಿತರಿದ್ದರು.