ನ್ಯೂಸ್

ಅಶ್ವಿನ್‌ಕುಮಾರ್ ಬೆಂಬಲಿಸಿ ರೋಡ್ ಶೋ

ತಲಕಾಡು: ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಅವರನ್ನು ಬೆಂಬಲಿಸಿ ಕಾರ್ಯಕರ್ತರು ತಲಕಾಡು ಮುಖ್ಯರಸ್ತೆಯಲ್ಲಿ ಶನಿವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.


ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ವಿಚಾರವಾದಿ ಪ್ರಭುಸ್ವಾಮಿ ಮಾತನಾಡಿ, ಕರೊನಾ ಕಾಲದಲ್ಲಿ ಜಗತ್ತೇ ಬಾಗಿಲು ಹಾಕಿಕೊಂಡಿದ್ದಾಗ, ಕ್ಷೇತ್ರದ ಜನರ ಸೇವೆಗೆ ಹೊರಬಂದ ಶಾಸಕರು, ಹಗಲಿರುಳು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಬೆಂಬಲಿಸಿ ಈ ಬಾರಿಯೂ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.


ಈ ವೇಳೆ ಅಶ್ವಿನ್ ಕುಮಾರ್ ಸಹೋದರ ಶ್ರೀಧರ್, ಹಸ್ತಿಕೇರಿ ನಾಗರಾಜು, ಗ್ರಾಮದ ಮುಖಂಡರಾದ ಜೆ.ರಾಜು, ಮಾಳಗಯ್ಯ ಸತೀಶ್ ನಾಯಕ, ಗ್ರಾ.ಪಂ.ಸದಸ್ಯರಾದ ಟಿ.ಸಿ.ಕುಮಾರನಾಯಕ, ಉಮೇಶ್, ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ನೌಷದ್, ಮಾಜಿ ಅಧ್ಯಕ್ಷ ಅಜ್ಮಲ್ ಬೇಗ್, ಹೆಮ್ಮಿಗೆ ಹೊನ್ನನಾಯಕ, ಕುಕ್ಕೂರು ಕೆ.ಎಲ್.ಉಮಾಪತಿ, ಕಾಳಬಸವನಹುಂಡಿ ರಾಚನಾಯಕ, ಸಣ್ಣಪುರಿ ನಾರಾಯಣ, ಹಳೇಬೀದಿ ಸುಂದರ, ಮಹದೇಶ, ಜೆಡಿಎಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಯಶೋದಮ್ಮ, ಹಸ್ತಿಕೇರಿ ನಾಗರಾಜು, ತಾ.ಪಂ.ಮಾಜಿ ಸದಸ್ಯ ಸುಬ್ರಹ್ಮಣ್ಯ ಇತರರು ಪಾಲ್ಗೊಂಡಿದ್ದರು.