ಸರಗೂರು: ಅವಳಿ ತಾಲೂಕುಗಳು ಸಮಗ್ರ ಅಭಿವೃದ್ಧಿಗಾಗಿ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕಿದೆ ಎಂದು ಶಾಕಸರ ಸಹೋದರ ಸುನೀಲ್ ಚಿಕ್ಕಮಾದು ಮನವಿ ಮಾಡಿದರು.
ತಾಲೂಕಿನ ಕೊತ್ತೇಗಾಲ ಮತ್ತು ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರದಕಟ್ಟೆ, ಹೂವಿನಕೊಳ, ಹುಣಸಹಳ್ಳಿ, ಅಡಹಳ್ಳಿ,ಮನುಗನಹಳ್ಳಿ ಗ್ರಾಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರ ಪರವಾಗಿ ಭಾನುವಾರ ಬಿರುಸಿನ ಮತಪ್ರಚಾರ ನಡೆಸಿ ಮಾತನಾಡಿದರು.
ಅನಿಲ್ ಚಿಕ್ಕಮಾದು ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿದ್ದು, ಇದನ್ನು ಸಹಿಸದ ವಿರೋಧಿ ಪಕ್ಷದವರು ಏನೂ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದರು. ಜತೆಗೆ ಸರಗೂರು ತಾಲೂಕು ಕೇಂದ್ರವಾಗಲು ದಿ.ಆರ್.ಧ್ರುವನಾರಾಯಣ ಅವರ ಪಾತ್ರ ದೊಡ್ಡದು ಎಂದರು.
ಜಿಪಂ ಸದಸ್ಯ ಚಿಕ್ಕವೀರ ನಾಯಕ, ಪಪಂ ಸದಸ್ಯ ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಪುರದಕಟ್ಟೆ ಬಸವರಾಜು, ಮನುಗನಹಳ್ಳಿ ಗುರುಸ್ವಾಮಿ,ನಂದಿನಾಥಪುರ ಮಣಿ, ಅಡಹಳ್ಳಿ ಮಂಜು, ಹುಚ್ಚಪ್ಪ,ಕಳಸೂರು ಬಸವರಾಜು, ಅಗ್ನಿ ಹಾಜರಿದ್ದರು.