ನ್ಯೂಸ್

ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಇದಾಗಿದೆ / ಓಂಶಕ್ತಿ ಚಲಪತಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡನೆ ಮಾಡಿರುವ ಬಜೆಟ್ ನೀರಸದಾಯಕ ಬಜೆಟ್ ಆಗಿದ್ದು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಬಜೆಟ್ ಆಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದರು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ಮತ್ತು ಆದ್ಯತೆ ನೀಡಿದೆ. ಜನಸಾಮಾನ್ಯರ ಕೈಗೆ ಸಿಗದ ಬಜೆಟ್ ಆಗಿದೆ. ಅಂಗೈನಲ್ಲಿ ಆಕಾಶ ತೋರಿಸಿದ ಹಾಗೆ ದೂರದ ಬೆಟ್ಟ ನುಣ್ಣಗೆ ಕಾಣುವಂತೆ ಈ ಬಜೆಟ್ ರೂಪಿತವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಮೆಡಿಕಲ್ ಕಾಲೇಜು, ರೈತರ ಆಧುನಿಕ ಮಾರುಕಟ್ಟೆ, ಶಿವಾರಪಟ್ಟಣ ಬಳಿ ಮಾಲಿನ್ಯ ನಿಯಂತ್ರಣ ಇಂಡಸ್ಟಿçಯಲ್ ಪಾರ್ಕ್ ನಿರ್ಮಿಸಲು ಮುಂದಾಗಿರುವುದರಿAದ ಜಿಲ್ಲೆಯ ಬಡ ಜನರಿಗೆ ಅನುಕೂಲವಿಲ್ಲ.

ಎತ್ತಿನಹೊಳೆ ಯೋಜನೆಯಲ್ಲಿ ಕುಡಿಯುವ ನೀರನ್ನು ಕೋಲಾರಕ್ಕೆ ಯಾವಾಗ ತರುತ್ತೇವೆಂದು ಹೇಳಿಲ್ಲ. ಕೋಲಾರ, ಮಾಲೂರು ತಾಲ್ಲೂಕುಗಳಲ್ಲಿ ಹೊಸ ವರ್ತುಲ ರಸ್ತೆಗಳ ಘೋಷಣೆ ಇಲ್ಲ. ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ನೀಡುವ ಪ್ರಸ್ತಾಪವಿಲ್ಲ. ಟೊಮೆಟೋ, ಮಾವು ಸಂಸ್ಕರಣಾ ಘಟಕಗಳ ಬಗ್ಗೆ ಪ್ರಸ್ತಾಪವಿಲ್ಲ. ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳಾ ವಸತಿ ನಿಲಯ ನಿರ್ಮಿಸಿರುವುದು ಸ್ವಾಗತಾರ್ಹ. ಆದರೆ ಎಷ್ಟು ವರ್ಷದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂಬ ಸ್ಪಷ್ಟಣೆ ನೀಡಿಲ್ಲ ಎಂದರು.

ಚಿತ್ರ ೦೭ ಕೆ.ಎಲ್.ಆರ್. ೦೬ : ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ರವರ ಭಾವಚಿತ್ರ