ಎನ್.ಆರ್.ಪುರ ತಾಲೂಕು ಗುಬ್ಬಿಗಾ ಗ್ರಾಪಂ ಅರಳಿಕೊಪ್ಪ ಗ್ರಾಮದಲ್ಲಿ ಕಾಡಾನೆಗಳು ಹಾವಳಿ ಮಾಡಿರುವುದು. 
ನ್ಯೂಸ್

ಅರಳಿಕೊಪ್ಪದಲ್ಲಿ ಕಾಡಾನೆ ಕಾಟ

ಎನ್.ಆರ್.ಪುರ: ಗುಬ್ಬಿಗಾ ಗ್ರಾಪಂ ಅರಳಿಕೊಪ್ಪ ಗ್ರಾಮದಲ್ಲಿ ಕಳೆದ 3-4 ದಿನದಿಂದ 2 ಕಾಡಾನೆಗಳು ಕಾಣಿಸಿಕೊಂಡಿದ್ದು ತೋಟಕ್ಕೆ ನುಗ್ಗಿ ಅಡಕೆ, ಬಾಳೆ ನಾಶ ಮಾಡುತ್ತಿವೆ. 4 ದಿನದ ಹಿಂದೆ ಅರಳಿಕೊಪ್ಪದ ವಿಜು ಎಂಬುವರ ತೋಟಕ್ಕೆ ನುಗ್ಗಿ ಅಡಕೆ ಮರ ಹಾಗೂ ಬಾಳೆ ಗಿಡಗಳನ್ನು ಹಾಳು ಮಾಡಿತ್ತು. ಶನಿವಾರ ಹಾಗೂ ಭಾನುವಾರ ರಾತ್ರಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು ರಾತ್ರಿ ಮಾವಿನ ಮನೆ ಮಂಜುನಾಥ್ ಹಾಗೂ ಅರಳಿಕೊಪ್ಪ ಗ್ರಾಮದ ಎಸ್.ಎನ್.ಮಂಜುನಾಥ್ ಅವರ ತೋಟಕ್ಕೆ ನುಗ್ಗಿ ನೂರಾರು ಅಡಕೆ, ಬಾಳೆ ಮರವನ್ನು ಹಾಳು ಮಾಡಿವೆ. ಇದುವರೆಗೆ ಅರಳಿಕೊಪ್ಪ ಗ್ರಾಮಕ್ಕೆ ಕಾಡಾನೆಗಳು ಬಂದಿರಲಿಲ್ಲ. ಇದೇ ಪ್ರಥಮ ಬಾರಿಗೆ ಕಾಡಾನೆಗಳು ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಸ್ಥಳಕ್ಕೆ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ, ಉಪವಲಯ ಅರಣ್ಯಾಧಿಕಾರಿ ಸುರೇಶ ರೆಡ್ಡಿ ಮತ್ತಿತರ ಅರಣ್ಯ ಸಿಬ್ಬಂದಿ, ಎಲಿಂಟ್ ಟಾಸ್ಕ್ ಪೋರ್ಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.