ವಿಜಯವಾಣಿ ಸುದ್ದಿಜಾಲ ಕೋಲಾರ
ಅರಣ್ಯ ಬೆಂಕಿ ಕುರಿತು ಸಾರ್ವಜನಿಕರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಮೂಕ ಪ್ರಾಣಿಗಳ ರಕ್ಷಣೆ ಮಾಡುವ ಜೊತೆಗೆ ನೀರು ಆಹಾರವನ್ನು ವ್ಯವಸ್ಥೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ನಗರದ ಅರಣ್ಯ ಇಲಾಖೆ ಅವರಣದಲ್ಲಿ ಗುರುವಾರ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿ, ಬೇಸಿಗೆ ಆರಂಭವಾಗುತ್ತಿದ್ದAತೆ ಕೆಲವು ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿ ತಮಾಷೆ ನೋಡುತ್ತಿರುತ್ತಾರೆ. ಇದರಿಂದ ಕಾಡಿನಲ್ಲಿರುವ ಮರಗಿಡಗಳು ನಾಶವಾಗುವ ಜೊತೆಗೆ ಮೂಕ ಪ್ರಾಣಿಗಳು ಮನುಷ್ಯನ ಬೇಜವಬ್ದಾರಿಗೆ ಬಲಿಯಾಗುತ್ತಿರುವುದು ಮಾನವನಿಗೆ ಶಾಪವಾಗಿ ಪರಿಣಮಿಸುತ್ತಿದೆ ಎಂದು ಕಿಡಿಗೇಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಮತ್ತು ಅಗ್ನಿ ಶಾಮಕ ಇಲಾಖೆಯವರು ಉತ್ತಮ ಸಮನ್ವಯತೆಯಿಂದ ಅನಾಹುತ ಆಗದಂತೆ ಯಶಸ್ವಿಯಾಗಿ ಕೆಲಸ ಮಾಡುವ ಜೊತೆಗೆ ಅತಿ ಹೆಚ್ಚು ಅರಣ್ಯ ಇರುವ ಬಂಗಾರಪೇಟೆ ಶ್ರೀನಿವಾಸಪುರ ಮುಳಬಾಗಿಲು ಅರಣ್ಯ ವಲಯವನ್ನು ಅತಿಸೂಕ್ಷö್ಮ ಎಂದು ಗುರುತಿಸಿ ಕಾಡು ರಕ್ಷಣೆ ಮಾಡಲು ಸಂಚಾರಿ ಅರಣ್ಯ ಸಿಬ್ಬಂದಿ ವಾಹನವನ್ನು ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಅರಣ್ಯದಲ್ಲಿ ಬೆಂಕಿ ಆಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಲಭ್ಯವಿರುವ ಪ್ರದೇಶಗಳನ್ನು ಗುರುತಿಸಿ ಬೆಂಕಿ ಕಾಣಿಸಿಕೊಂಡಾಗ ಹತ್ತಿರದಲ್ಲಿರುವ ಕಾರ್ಖಾನೆ, ಮಾಲ್, ಸಾರ್ವಜನಿಕರು ತಮ್ಮ ಬಳಿ ಲಭ್ಯವಿರುವ ನೀರು ಮತ್ತು ಸೌಲಭ್ಯಗಳನ್ನು ಅಧಿಕಾರಿಗಳು ಕೋರಿದರೆ ತಕ್ಷಣ ಒದಗಿಸಬೇಕು. ಈ ಸಂಬAಧ ಅಸಹಕಾರ ನೀಡಿದರೆ ರಾಷ್ಟಿçÃಯ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಅರಣ್ಯ ರಕ್ಷಣೆ ಮಾನವನ ಜವಬ್ದಾರಿ ಜೊತೆಗೆ ಅರಣ್ಯದಲ್ಲಿರುವ ಸಾವಿರಾರು ಮೂಕ ಪ್ರಾಣಿಗಳ ವಾಸದ ತಾಣ ಮಾತು ಬಾರದ ಪ್ರಾಣಿಗಳನ್ನು ರಕ್ಷಣೆ ಮಾಡಬೇಕಾದರೆ ಮನುಷ್ಯನು ಜವಬ್ದಾರಿಯಿಂದ ಬೇಸಿಗೆಯಲ್ಲಿ ಕಾಡಿನ ರಕ್ಷಣೆಗೆ ರಕ್ಷಣಾ ಕವಚದಂತೆ ನಿಲ್ಲಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾಡು ರಕ್ಷಣೆಯ ಜೊತೆಗೆ ಬೇಸಿಗೆಯಲ್ಲಿ ಮೂಕ ಪ್ರಾಣಿಗಳಿಗೆ ನೀರು ಮತ್ತು ಆಹಾರವನ್ನು ಆಯಾ ಅರಣ್ಯ ಪಕ್ಕದಲ್ಲಿರುವ ಗ್ರಾಮಸ್ಥರು ಒದಗಿಸುವ ಮುಖಾಂತರ ಮಾನವೀಯತೆ ತೋರುವ ಜೊತೆಗೆ ಅರಣ್ಯ ಸಿಬ್ಬಂದಿ ಕರಪತ್ರದ ಮುಖಾಂತರ ಕಾಡು ರಕ್ಷಣೆಗೆ ಬೆಂಕಿ ಕುರಿತು ಅರಣ್ಯ ರಕ್ಷಣೆ ಮಾಡಬೇಕೆಂದು ಒತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾರೆಡ್ಡಿ, ಮಂಗಸAದ್ರ ತಿಮ್ಮಣ್ಣ, ಗೀರೀಶ್, ಶೈಲಜ, ರಾಧಮ್ಮ, ರತ್ನಮ್ಮ, ಶೋಭ, ಚೌಡಮ್ಮ ಮುಂತಾದವರಿದ್ದರು.
ಚಿತ್ರ ೧೩ ಕೆ.ಎಲ್.ಆರ್. ೦೩ : ಅರಣ್ಯಕ್ಕೆ ಬೆಂಕಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಹಾಗೂ ಕಾಡುಪ್ರಾಣಿಗಳಿಗೆ ನೀರು ಒದಗಿಸಬೇಕೆಂದು ಒತ್ತಾಯಿಸಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ರೈತ ಸಂಘದ ಮುಖಂಡರು.