ತರೀಕೆರೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯಲ್ಲಿ ಆರ್‌ಎ್ಒ ಆಸ್ಿ ಅಹಮದ್ ಹಾಗೂ ಸಿಬ್ಬಂದಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಿಸಿದರು. ಟಿ.ಕೆ.ಶ್ರೀನಿವಾಸ್, ಕೆ.ಪ್ರದೀಪ್, ಚನ್ನೇಗೌಡ, ಮುನಾವರ್ ಪಾಷಾ ಇತರರಿದ್ದರು.  
ನ್ಯೂಸ್

ಅರಣ್ಯ ಸಂಪತ್ತು ದೇಶದ ಅಭಿವೃದ್ಧಿಗೆ ಪೂರಕ

ತರೀಕೆರೆ: ಅರಣ್ಯ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಆರ್‌ಎ್ಒ ಆಸ್ಿ ಅಹಮದ್ ಹೇಳಿದರು.
ಸೋಮವಾರ ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಮಾತನಾಡಿದರು.
ಕಾಡಿನಲ್ಲಿ ಗಿಡ, ಮರ, ಸಸ್ಯ ಸಂಕುಲ ಪೋಷಿಸಿ ಸಮೃದ್ಧ ಮಳೆಯಾದರೆ ನಾಡು ಸುಭೀಕ್ಷವಾಗಿರಲು ಸಾಧ್ಯ. ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಮೂಡಿಸಿ ಅರಣ್ಯ ನಾಶ ತಡೆಗಟ್ಟಬೇಕು. ಅರಣ್ಯ ಸಂಪತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಎಂದರು.
ರಾಜ್ಯದಲ್ಲಿ ಅರಣ್ಯ ಸಂಪತ್ತು ರಕ್ಷಿಸುವ ಸಲುವಾಗಿ ಜೀವತೆತ್ತ ಅಧಿಕಾರಿಗಳು, ಸಿಬ್ಬಂದಿಯನ್ನು ಸ್ಮರಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಡಿಆರ್‌ಎ್ ಟಿ.ಕೆ.ಶ್ರೀನಿವಾಸ್, ಕೆ.ಪ್ರದೀಪ್, ಟಿ.ದಿನೇಶ್, ಚನ್ನೇಗೌಡ, ಮುನಾವರ್ ಪಾಷಾ, ಬಿ.ಧರ್ಮಾನಾಯ್ಕ, ಗಸ್ತು ಅರಣ್ಯ ಪಾಲಕರು ಹಾಗೂ ಕಚೇರಿ ಸಿಬ್ಬಂದಿ ಇದ್ದರು.