ಬಿದರಹಳ್ಳಿ ಸಮೀಪದ ಕೋಳೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಳೆಕಾಡು ದಿನಾಚರಣೆ ನಡೆಯಿತು. ರಮೇಶ್ ಬಾಬು, ಕಾವ್ಯಾ, ಜಿ.ಎಸ್.ಆದಿತ್ಯರಾವ್, ಬಿ.ಟಿ.ವೆಂಕಟೇಶ್, ಮಲ್ಲಿಕಾರ್ಜುನ, ಕೆ.ಸಿ.ಮೋಹನ್ ಇತರರಿದ್ದರು. 
ನ್ಯೂಸ್

ಅರಣ್ಯ ಉಳಿಸಿದಲ್ಲಿ ಜೀವಸಂಕುಲಗಳ ಸಂರಕ್ಷಣೆ

ಮೂಡಿಗೆರೆ: ಕಾಡು ಉಳಿಸಿದರೆ ಹವಾಮಾನ ನಿಯಂತ್ರಿಸಲು ಮತ್ತು ಜೀವಸಂಕುಲಗಳನ್ನು ಸಂರಕ್ಷಿಸಲು ಸಾಧ್ಯ. ಮಳೆ ಕಾಡುಗಳು ಪ್ರಾಕೃತಿಕ ಸಮತೋಲನ ಕಾಪಾಡಲು ಪೂರಕ ಎಂದು ಡಿಸಿಎಫ್ ರಮೇಶ್‌ಬಾಬು ತಿಳಿಸಿದರು.

ಬಿದರಹಳ್ಳಿ ಸಮೀಪದ ಕೋಳೂರು ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಅರಣ್ಯ ಇಲಾಖೆಯಿಂದ ಭಾನುವಾರ ಏರ್ಪಡಿಸಿದ್ದ ವಿಶ್ವ ಮಳೆ ಕಾಡುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವ ಮಳೆ ಕಾಡು ದಿನಾಚರಣೆಯನ್ನು 2017ರ ಜೂ. 22 ರಂದು ಆಚರಣೆಗೆ ತರಲಾಯಿತು. ಇದನ್ನು ರೇನ್‌ಫಾರೆಸ್ಟ್ ಪಾರ್ಟ್‌ನರ್‌ಶಿಪ್ ಎಂಬ ಗುಂಪುಗಳ ಸಹಯೋಗದಿಂದ ರಚಿಸಲಾಯಿತು. ಕಾಡು ಹವಾಮಾನ ಸಮತೋಲನ ಕಾಪಾಡುತ್ತವೆ. ಪ್ರಪಂಚದಾದ್ಯಂತ ಮಳೆಕಾಡುಗಳು ನಶಿಸುತ್ತಿರುವ ಪರಿಣಾಮ ಶುದ್ಧ ಗಾಳಿ ದೊರೆಯದಂತಾಗಿದೆ. ಕಾಡುಗಳು ವಿನಾಶದ ಅಂಚಿಗೆ ತಲುಪಿದ್ದರಿಂದ ಕಾಡುಪ್ರಾಣಿಗಳು ನಾಡಿಗೆ ಪ್ರವೇಶಿಸುವಂತಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಪ್ರತಿಯೊಬ್ಬರು ಮನೆ ಸುತ್ತ ಅಥವಾ ಶಾಲೆಗಳ ಸುತ್ತಮುತ್ತಲ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದಲ್ಲಿ ನೆರಳಿನೊಂದಿಗೆ ಉತ್ತಮ ಗಾಳಿ, ಪಕ್ಷಿಗಳಿಗೆ ಆಹಾರ ದೊರೆಯುತ್ತದೆ ಎಂದು ತಿಳಿಸಿದರು.

ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಚಾರ್ಯ ಬಿ.ಟಿ.ವೆಂಕಟೇಶ್, ಬಾಳೂರಿನ ಇಂದಿರಾಗಾಂಧಿ ವಸತಿಶಾಲೆಯ ಪ್ರಾಚಾರ್ಯ ಮಲ್ಲಿಕಾರ್ಜುನ, ಚಿಕ್ಕಮಗಳೂರು ಎಸಿಎಫ್ ಕೆ.ಸಿ.ಮೋಹನ್ ಇತರರಿದ್ದರು.