ನ್ಯೂಸ್

ಅರಣ್ಯ ಇಲಾಖೆಯವರು ಬೆಳೆ ನಾಶ ಮಾಡಿದ್ದಕ್ಕೆ ಮತ್ತು ಸುಳ್ಳು ಕೇಸನ್ನು ದಾಖಲಿಸಿರುವುದಕ್ಕೆ ರೈತರ ಮಹಿಳೆಯರಿಬ್ಬರ ಆತ್ಮಹತ್ಯೆಗೆ ಯತ್ನ

ವಿಜಯವಾಣಿ ಸುದ್ದಿಜಾಲ ಕೋಲಾರ

ಅರಣ್ಯ ಇಲಾಖೆಯವರು ಲಕ್ಷಾಂತರ ಬೆಲೆ ಬಾಳುವ ತರಕಾರಿ ಬೆಳೆಗಳನ್ನು ನಾಶಪಡಿಸಿದ್ದಲ್ಲದೆ ನಮ್ಮ ಮೇಲೆಯೇ ಕೇಸು ದಾಖಲಿಸಿ ರಾತ್ರೋರಾತ್ರಿ ಮನೆಗಳ ದಾಳಿ ಮಾಡಿ ನಮ್ಮ ಸಂಬAಧಿಕರನ್ನು ಕರೆದೊಯ್ದಿದ್ದಾರೆಂದು ಅತಾಶೆಗೊಂಡ ರೈತ ಮಹಿಳೆಯರಾದ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷಿö್ಮÃದೇವಮ್ಮ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದಿ ಘಟನೆ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಅರಣ್ಯ ಇಲಾಖೆಯವರು ಶನಿವಾರ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಒತ್ತುವರಿಯನ್ನು ತೆರವು ಮಾಡುವ ಸಲುವಾಗಿ ರೈತರಾದ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷಿö್ಮÃದೇವಮ್ಮ ರವರ ಲಕ್ಷಾಂತರ ರೂಪಾಯಿಗಳ ಬೆಲೆ ಬಾಳುವ ತರಕಾರಿ ಬೆಳೆಗಳನ್ನು ನಾಶಪಡಿಸದರೆಂದು ಹಾಗೂ ನಾಶಪಡಿಸುವ ಸಂದರ್ಭದಲ್ಲಿ ಅಡ್ಡಿಪಡಿಸಿದ್ದಕ್ಕೆ ನಮ್ಮ ಮೇಲೆ ಮತ್ತು ನಮ್ಮ ಸಂಬAಧಿಕರ ಮೇಲೆ ಕೇಸು ದಾಖಲಿಸಿ ರಾತ್ರಿ ವೇಳೆ ಪೋಲಿಸರು ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡೆದಿರುವುದಕ್ಕೆ ರೈತ ಮಹಿಳೆಯರಾದ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷಿö್ಮÃದೇವಮ್ಮ ಭಾನುವಾರ ಬೆಳ್ಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಕೂಡಲೇ ರೈತರ ಮಹಿಳೆಯರಿಬ್ಬರನ್ನು ಗ್ರಾಮಸ್ಥರು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸದ್ಯಕ್ಕೆ ಯಾವುದೇ ರೀತಿಯ ಪ್ರಾಣ ಭಯವಿಲ್ಲವೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ರೈತ ಮಹಿಳೆಯರಾದ ಪಾಳ್ಯ ಗ್ರಾಮದ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷಿö್ಮÃದೇವಮ್ಮ ರವರಿಗೆ ಸೇರಿದ ಜಮೀನಿನಲ್ಲಿ ಕ್ಯಾರಟ್, ಹೂಕೋಸು, ಟಮೋಟ ಬೆಳೆಗಳನ್ನು ಬೆಳೆಯಲಾಗಿತ್ತು. ಶುಕ್ರವಾರ ಅರಣ್ಯ ಇಲಾಖೆಯವರು ಸದರಿ ಜಮೀನು ನಮಗೆ ಸೇರಿದ್ದು ಎಂದು ಗಡಿ ಗುರ್ತಿಸಲು ಹೋಗಿ ಬೆಳೆಯನ್ನು ನಾಶ ಪಡಿಸಿದ್ದರು. ಶನಿವಾರ ಬೆಳೆಯನ್ನು ಸಂಪೂರ್ಣ ನಾಶ ಪಡಿಸಿ ಜೆಸಿಬಿಗಳು ಹೋದಾಗ ಸಂಸದ ಮುನಿಸ್ವಾಮಿ ಮತ್ತು ಬಿಜೆಪಿ ಮುಖಂಡರು ಹಾಗೂ ರೈತರು ಜಮಾಯಿಸಿ ಜೆಸಿಬಿಗಳನ್ನು ಮತ್ತು ಅರಣ್ಯ ಸಿಬ್ಬಂದಿಯನ್ನು ಓಡಿಸಿದರು. ಹಾಗೂ ರೊಚ್ಚಿಗೆದ್ದ ರೈತರು ಕೆಲವು ಜೆಸಿಬಿಗಳನ್ನು ಜಖಂಗೊಳಿಸಿದ್ದಾರೆAದು ಅರಣ್ಯ ಇಲಾಖೆಯ ದೂರಿನ ಮೇಲೆ ಪೋಲಿಸರು ದೂರು ದಾಖಲಿಸಿಕೊಂಡಿದ್ದರು.

ಶನಿವಾರ ತಡರಾತ್ರಿ ಪಾಳ್ಯ ಗ್ರಾಮ ಮತ್ತು ದ್ವಾರಸಂದ್ರ ಗ್ರಾಮದ ರೈತರ ಮನೆಗಳ ಮೇಲೆ ದಾಳಿ ನಡೆಸಿ ಕೆಲವು ರೈತರನ್ನು ವಶಕ್ಕೆ ಪಡೆದು ನಂತರ ರೈತರ ಮಹಿಳೆಯರ ಮನೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಹತಾಶೆಗೊಂಡ ರೈತ ಮಹಿಳೆಯರಿಬ್ಬರು ಭೂಮಿ ಕಳೆದುಕೊಂಡಿದ್ದಲ್ಲದೆ ನಮ್ಮ ಮೇಲೆಯೇ ದೂರು ದಾಖಲಿಸಿಕೊಂಡು ರಾತ್ರಿ ವೇಳೆ ಮನೆಗಳ ಮೇಲೆ ದಾಳಿ ಮಾಡುತ್ತಿರುವುದು ಯಾವ ನ್ಯಾಯವೆಂದು ಜೀವನದಲ್ಲಿ ಜಿಗುಪ್ಸೆಗೊಂಡು ಭಾನುವಾರ ಬೆಳ್ಳಿಗ್ಗೆ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೧ : ರೈತ ಮಹಿಳೆಯರಾದ ಶಾಮಲ ಗೋಪಾಲರೆಡ್ಡಿ ಮತ್ತು ಲಕ್ಷಿö್ಮÃದೇವಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.