ನ್ಯೂಸ್

ಅರಟಾಳ ಪಿಕೆಪಿಎಸ್ ಕಟ್ಟಡ ಉದ್ಘಾಟನೆ ಇಂದು

ಅರಟಾಳ: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭ ನ.29ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ. ಕೌಲಗುಡ್ಡದ ಸಿದ್ಧಶ್ರೀ ಮದಗೊಂಡೇಶ್ವರ ಆಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಕುಂಚನೂರ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಮದ ಮಾಧುಲಿಂಗ ಮಹಾರಾಜರು, ಹಿಪ್ಪರಗಿಯ ಮಹಾಂತಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸುವರು. ಮಲ್ಲಪ್ಪ ಪೂಜಾರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಜೀವ ಅವಕ್ಕನವರ, ಗುರಪ್ಪ ದಾಶ್ಯಾಳ, ಎನ್.ಜಿ.ಕಲಾವಂತ, ಶಂಕರ ನಂದೇಶ್ವರ, ರಾಘವೇಂದ್ರ ನೂಲಿ, ಸಾಗರ ಖಂಡಾಳಕರ, ಆನಂದ ಚೌಲಗಿ, ಬಾಬುರಾವ ಮೆಂಡಿಗೇರಿ, ಮೇಲಗಿರೆಪ್ಪ ಜಂಬಗಿ, ಶಿವಪ್ಪ ಹಟ್ಟಿ, ಮಲ್ಲಪ್ಪ ಡಂಗಿ, ಕಳಸಪ್ಪ ಹೊನಗೌಡ, ರಾಮಪ್ಪ ಪೂಜಾರಿ, ಮಹಾದೇವ ಡಂಗಿ, ಶಿವಾನಂದ ಖ್ಯಾಡಿ, ಕಾಂತಾಬಾಯಿ ಹಟ್ಟಿ, ಗಂಗವ್ವ ಅರ್ಜುಣಗಿ, ಸರಸ್ವತಿ ಕಾಂಬಳೆ, ಭಾರತಿ ನಾಯಿಕ, ಮಹಾದೇವಿ ಪಾಟೀಲ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಪರಮಾನಂದ ಖ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.