ನ್ಯೂಸ್

ಅರಕಲಗೂಡು ತಾಲೂಕಿನ ಕೇರಳಾಪುರದಲ್ಲಿ ಐವರಿಗೆ ಹುಚ್ಚುನಾಯಿ ಕಡಿತ: ವೃದ್ಧೆ, ಬಾಲಕಿಗೆ ಗಂಭೀರ ಗಾಯ

ಅರಕಲಗೂಡು: ತಾಲೂಕಿನ ಕೇರಳಾಪುರದಲ್ಲಿ ಗ್ರಾಮದಲ್ಲಿ ಐವರ ಮೇಲೆ‌ ದಾಳಿ ನಡೆಸಿರುವ ಹುಚ್ಚು ನಾಯಿ ಇಬ್ಬರನ್ನು ತೀವ್ರವಾಗಿ ಕಚ್ಚಿ ಮಾರಣಾಂತಿಕವಾಗಿ ಗಾಯಗೊಳಿಸಿದೆ.

ಮನೆ ಮುಂದೆ ಕುಳಿತಿದ್ದ ವೃದ್ಧೆ ತಾಯಮ್ಮ ೭೦ ಅವರ ಮುಖ ಬಾಯಿಗೆ‌ ಕಚ್ಚಿ ವಿಕಾರಗೊಳಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಹೇಮಂತಕುಮಾರ್ ಎಂಬುವರ ಮೂರು ವರ್ಷದ ಮಗಳು ತನುಶ್ರೀ ಅವರ ಕೈ ಕಚ್ಚಿ ಮಾಂಸಖಂಡ ಕಿತ್ತು ಬಂದಿದೆ. ನಾಯಿ ದಾಳಿಗೆ ತುತ್ತಾದ ವೃದ್ಧೆ ಮತ್ತು ಮಗು ನರಕಯಾತನೆ ಅನುಭವಿಸುವಂತಾಗಿದೆ.

ಐವರ ಮೇಲೆ ಹುಚ್ಚು ನಾಯಿ ದಾಳಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಪರಿಣಾಮವಾಗಿ
ಜನತೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.