ಹುಣಸೂರು: ಸೆಸ್ಕ್ ನಿಗಮದಿಂದ ಜಾರಿಗೊಂಡಿರುವ ಅಮೃತಜ್ಯೋತಿ ಯೋಜನೆಯ ನೋಂದಣಿ ಅಭಿಯಾ ನಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಶುಕ್ರವಾರ ಚಾಲನೆ ನೀಡಿದರು.
ನಗರದ ಪೌರಕಾರ್ಮಿಕರ ಕಾಲನಿ ಯಲ್ಲಿ ಶುಕ್ರವಾರ ಫಲಾನುಭವಿಗಳಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸ್ವಾತಂತ್ರೊೃೀ ತ್ಸದ ಅಮೃತ ಮಹೋತ್ಸವದ ಸ್ಮರಣಾ ರ್ಥ ಸರ್ಕಾರ ಅಮೃತ ಜ್ಯೋತಿ ಯೋಜನೆ ಜಾರಿಗೆ ತಂದಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಸರ್ಕಾರದಿಂದ 75 ಯೂನಿಟ್‌ಗಳ ಶುಲ್ಕವನ್ನು ನೇರ ಹಣ ವರ್ಗಾವಣೆಯ ಮೂಲಕ ಪಾವತಿಸಲಿದೆ.
ಸರ್ಕಾರದ ನೀತಿ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಯೋಜನೆಯ ಯಶಸ್ವಿಗೆ ಜನರು ಸಹಕರಿಬೇಕು. ನಿಜವಾದ ಫಲಾನು ಭವಿ ಗಳು ಮಾತ್ರ ಸೌಲಭ್ಯ ಪೆಡೆಯುವ ಮೂಲಕ ಯೋಜನೆ ಯಶಸ್ಸಿಗೆ ಸಹಕರಿ ಸಬೇಕು ಎಂದು ಕೋರಿದರು.
ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ, ಯೋಜನೆಯ 2022ರ ಮೇ 1ರಿಂದ ಅನ್ವಯವಾಗುವಂತೆ ಜಾರಿಗೊಂಡಿದೆ. ತಿಂಗಳಿಗೆ 250 ಯೂನಿಟ್‌ನ ಒಳಗೆ ವಿದ್ಯುತ್ ಬಳಕೆ ಮಾಡುವ ಕುಟುಂಬ ಗಳು ನಿಗಮ ನಿಗದಿಪಡಿಸಿದ ಅವಧಿ ಯೊಳಗೆ ಬಿಲ್ ಪಾವತಿಸಿದಲ್ಲಿ ಮಾತ್ರ ಅವರ ಖಾತೆಗೆ ನೇರವಾಗಿ 75 ಯೂನಿಟ್‌ನ ಮೊತ್ತವನ್ನು ಸರ್ಕಾರ ಪಾವತಿಸಲಿದೆ. 250 ಯೂನಿಟ್‌ಗೂ ಮೇಲ್ಪಟ್ಟು ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಯೋಜನೆ ಅನ್ವಯವಾಗು ವುದಿಲ್ಲ. ಅಲ್ಲದೆ ನಿಗದಿತ ಅವಧಿ ಯೊಳಗೆ ಬಿಲ್ ಪಾವತಿಸಿದಲ್ಲಿ ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ.
ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳಲು ತೊಂದರೆ ಉಂಟಾ ಗುತ್ತಿದೆ ಎಂಬ ದೂರು ಬಂದ ಹಿನ್ನೆಲೆ ಯಲ್ಲಿ ಸರ್ಕಾರ ಸೆಸ್ಕ್ ಸಿಬ್ಬಂದಿಗೆ ಮನೆಮನೆಗೆ ತೆರಳಿ ನೋಂದಣಿ ಅಭಿ ಯಾನ ನಡೆಸಲು ಸೂಚಿಸಿದ್ದು, ಇಂದು 100 ಫಲಾನುಭವಿಗಳನ್ನು ನೋಂದಣಿ ಮಾಡಿಸಲಾಗಿದೆ.ಅಭಿಯಾನ ಮುಂದು ವರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ರಾಣಿ ಪರುಮಾಳ್, ಅನುಷಾ, ಪೌರಾ ಯುಕ್ತೆ ಎಂ.ಮಾನಸ, ಎಇಇ ಎಇ ಸೋಮಶೇಖರ್, ಹಿರಿಯ ಸಹಾಯಕ ರಾದ ಪ್ರಶಾಂತ್, ಶಶಿ, ಲೈನ್ ಮನ್ ಶಿವಕುಮಾರ್ ಇತರರು ಇದ್ದರು.