ನ್ಯೂಸ್

ಅಮೃತ ಬಿಂದು- ಶ್ರೀಶೈವಾಗಮ: ಎಲ್ಲ ಕ್ರಿಯೆಗಳಿಗೂ ಶಿವನೇ ಪ್ರೇರಣೆಯೇ?

ಸೋSಹಂ ಭಾವೇನ ವಿಶ್ವೇಶಂ ಧ್ಯಾಯನ್ ಕೃತ್ಯಾನಿ ಸರ್ವತಃ | ತದಿಂದ್ರಿಯಮುಖೇನೈವ

ಕ್ರಿಯಮಾಣಾನಿ ಭಾವಯನ್ || ಯದಾಚರತಿ ತಚ್ಛೀಲಂ ದ್ವಿಷಷ್ಟಿಕಮುದಾಹೃತಮ್ ||

‘ಸೋSಹಂ’ (ಅವನೇ ನಾನು) ಎಂಬ ಭಾವದಿಂದ ಶಿವನನ್ನು ಧ್ಯಾನಿಸುತ್ತ ತನ್ನ ಇಂದ್ರಿಯಾದಿಗಳಿಂದ ಉಂಟಾಗುವ ಎಲ್ಲ ಕ್ರಿಯೆಗಳಿಗೂ ಶಿವನೇ ಪ್ರೇರಣೆ ಎಂದು ಭಾವಿಸಿ ಸರ್ವಸಮರ್ಪಣ ಭಾವದಿಂದ ಇರುವುದು ಅರವತ್ತೆರಡನೆಯ ಶೀಲ. ‘ತೇನ ವಿನಾ ತೃಣಮಪಿ ನ ಚಲತಿ’ ಎಂಬ ಉಕ್ತಿಯಂತೆ ಶಿವನ ಆದೇಶವಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಅಂದ ಬಳಿಕ ನಮ್ಮೆಲ್ಲ ಸಾಧನೆಗಳಿಗೆ ಶಿವನೇ ಮೂಲ ಅಲ್ಲವೆ! ವ್ಯಕ್ತಿಯೊಬ್ಬ ಗಂಟನ್ನು ತನ್ನ ತಲೆಯ ಮೇಲಿರಿಸಿಕೊಂಡು ಕುದುರೆಯ ಮೇಲೆ ಕುಳಿತಂತೆ ದೇವರೇ ಎಲ್ಲ ನಡೆಸುತ್ತಿದ್ದರೂ ನಾವೇ ಎಲ್ಲವನ್ನೂ ಮಾಡುವಂತೆ ವರ್ತಿಸುವುದು ಸರಿಯಲ್ಲ.

| ಚಂದ್ರಜ್ಞಾನಾಗಮ (9.120) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು