oplus_2 
ನ್ಯೂಸ್

ಅಮಿತ್ ಷಾ ವಜಾಕ್ಕೆ ಆಗ್ರಹ

ಚಿತ್ರದುರ್ಗ: ಸಂಸತ್‌ನಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಭಾರತೀಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ದಾರಿಯುದ್ದಕ್ಕೂ ಅಮಿತ್ ಷಾ ವಿರುದ್ಧ ಧಿಕ್ಕಾರ ಕೂಗಿದರು.

ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್. ಪ್ರಕಾಶ್ ಬೀರಾವರ ಮಾತನಾಡಿ, ಅಮಿತ್ ಷಾ ಸಚಿವರಾಗಲು ದೇಶದ ಸಂವಿಧಾನ ಕಾರಣ. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಅವರು ಭೇಟಿ ನೀಡುವ ಕಡೆಗಳಲ್ಲಿ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಕೆ. ತಿಮ್ಮರಾಜು, ಉಪಾಧ್ಯಕ್ಷ ಚಂದ್ರಪ್ಪ ಘಾಟ್, ಜಿಲ್ಲಾಧ್ಯಕ್ಷ ಎನ್. ಪಾಂಡುರಂಗಪ್ಪ, ಪದಾಧಿಕಾರಿಗಳಾದ ಲೋಕೇಶ್ ಜೆ. ಸಿದ್ದಾಪುರ, ಆರ್. ಮಂಜುನಾಥ್, ವಾಸಿಕ್ ಅಹಮದ್, ಮಹಾಂತೇಶ್ ಟಿ. ಕಕ್ಕೇಹರವು, ಹರೀಶ್ ಎಂ.ಕೆ. ಹಟ್ಟಿ, ಚಿದಾನಂದ, ರಾಜಶೇಖರ್ ಓಬವ್ವನಾಗ್ತಿಹಳ್ಳಿ, ಕರಿಯಪ್ಪ ಎನ್. ಚಿಕ್ಕಾಲಘಟ್ಟ, ಎಚ್. ರಾಜಪ್ಪ, ಕೆ. ಮೋಹನ್‌ಕುಮಾರ್ ಇತರರು ಭಾಗವಹಿಸಿದ್ದರು.