ದಿನೇಶ್ ಗುಂಡೂರಾವ್. 
ನ್ಯೂಸ್

ಅಮಾಯಕರ ವಿರುದ್ಧದ ಪ್ರಕರಣ ಕೈಬಿಟ್ಟರೆ ತಪ್ಪೇನು?

ಕೋಲಾರ : ರಾಜ್ಯದಲ್ಲಿ ಆಡಳಿತರೂಡ ಪಕ್ಷ ಎಂದ ಮೇಲೆ ಶಾಸಕಾಂಗ ಸಭೆಯು ನಡೆಯುವುದು ಸಾಮಾನ್ಯ ವಿಷಯವಾಗಿದೆ. ಶಾಸಕಾಂಗ ಸಭೆಗಳನ್ನು ನಡೆಸುವುದು ಪಕ್ಷದ ಸಂಘಟನೆ, ಬೆಳವಣಿಗೆಗೆ ಪೂರಕವಾಗಿದೆ. ಇದರಲ್ಲಿ ಮಾಧ್ಯಮಗಳು ವಿಶೇಷತೆ ಹುಡುಕುವ ಅಗ್ಯವಿಲ್ಲ. ಈ ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗಲು ನಡೆದಿದ್ದವು, ಇಡೀ ದಿನ ಚರ್ಚೆಗಳು ನಡೆದಿತ್ತು. ಅಲ್ಲದೆ ನಾಳೆ ನಡೆಯಲಿರುವ ಶಾಸಕಾಂಗ ಸಭೆಯ ದಿನಾಂಕ ಈ ಹಿಂದೆಯೇ ನಿಗಧಿಪಡಿಸಲಾಗಿತ್ತು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಹೊರವಲಯದ ಸ್ಯಾನಿಟೋರಿಯಂ ಡಿಜಿಟಲ್ ನರ್ವ್ ಕೇಂದ್ರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ಶಾಸಕಾಂಗ ಸಭೆಯನ್ನು ಕರೆಯುವ ಮೂಲಕ ಚರ್ಚಿಸುವುದು ಸಹಜವಾದದ್ದು ಎಂದ ಅವರು ಬದಲಾವಣೆ ಎಂಬ ಮಾಹಿತಿಗೆ ಯಾವೂದೇ ಆಧಾರವಿಲ್ಲ ಎಲ್ಲವೂ ಸೃಷ್ಠಿಸಿರುವ ವಿಚಾರವಾಗಿದೆ. ಸೃಷ್ಠಿಸಲೆಂದು ಕೆಲವು ಇದ್ದಾರೆ. ಬದಲಾವಣೆ ಅಪ್ರಸ್ತುತವಾದದ್ದು, ಆಧಾರ ರಹಿತ ವಿಷಯಗಳ ಬಗ್ಗೆ ಚರ್ಚಿಸುವುದು ಅರ್ಥವಿಲ್ಲದದ್ದು ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಂತ್ರಿಗಳು ನಾವೆಲ್ಲಾ ಇದ್ದೇವೆ ಹಾಗಾಗಿ ಬದಲಾವಣೆ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ವಷ್ಟಪಡಿಸಿದರು.

ಅಸಮಾಧಾನ ಸಮಾಧಾನಗಳು ಆಡಳಿತದಲ್ಲಿ ಸಾಮಾನ್ಯವಾದ ವಿಷಯ ಅದೆಲ್ಲಾವನ್ನು ನಮ್ಮ ನಾಯಕರು ಬಗೆ ಹರಿಸುತ್ತಾರೆ ಏನೇ ಸಮಸ್ಯೆಗಳು ಎದುರಾದರೂ ಅವುಗಳೆಲ್ಲವನ್ನು ಎದುರಿಸುವಂತ ಸಾಮರ್ಥ್ಯ ನಮ್ಮ ಪಕ್ಷದ ನಾಯಕರಿಗೆ ಇದೆ ಎಂದ ಅವರು ಈ ಹಿಂದೆ ಒಗ್ಗಟ್ಟಿಲ್ಲ ಎಂದು ಹೇಳುತ್ತಿದ್ದೀರಿ ಆಗ ನಾವು ಒಗ್ಗಟ್ಟನ್ನು ತೋರಿಸಿದ್ದೇವು ಈಗಾ ಅಸಮಾಧಾನ ಎಂದು ಹೇಳುತ್ತಿದ್ದೀರಿ ಅದರೆ ಇವೆಲ್ಲಾವು ಅಧಾರ ರಹಿತ ಸೃಷ್ಠಿಸಿರುವ ವಿಷಯಗಳಾಗಿದೆ ಹೊರತು ನಮ್ಮಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳು ಕಂಡು ಬಂದಿರಲ್ಲ ಎಂದರು.

ಇಂದು ಆಧುನಿಕ ತಂತ್ರಜ್ಞಾನದಲ್ಲಿ ಅಸಾಧ್ಯ ಎಂದು ಭಾವಿಸುವುದೆಲ್ಲವನ್ನು ಸಾಧಿಸುತ್ತಾರೆ. ಅನೇಕ ನಕಲಿ ವಿಡಿಯೋ, ಆಡಿಯೋಗಳ ಮೂಲಕ ಗೊಂದಲಗಳು ಹುಟ್ಟಿ ಹಾಕುತ್ತಾರೆ ಆದರೆ ಅದು ಯಾವುದು ಯಶಸ್ವಿಯಾಗಲ್ಲ. ಹಾಗಾಗಿ ಸತ್ಯ ಯಾವುದು? ಸುಳ್ಳು ಯಾವುದು? ಎಂದು ಪರಿಶೀಲಿಸಿ ಮುಂದುವರೆಯಬೇಕಾಗಿದೆ. ಮೊಬೈಲ್ ವಾಟ್ಸ್ಆ್ಯಪ್‌ಗಳಲ್ಲಿ ಬರುವಂತ ಸುದ್ದಿಗಳಷ್ಟು ಅಧಾರ ರಹಿತವಾದ ಫೇಕ್ ಮಾಹಿತಿಗಳಾಗಿರುವುದು ಹಾಗಾಗಿ ಅವುಗಳಲ್ಲಿ ಪ್ರಾಮಾಣಿಕತೆಯ ಕಡೆ ಗಮನಹರಿಸ ಬೇಕಾಗಿದೆ ಎಂದರು.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣಗಳ ಕುರಿತು ಕೆಲವು ಅಮಾಯಕರನ್ನು ದುರುದ್ದೇಶ ಪೂರಕವಾಗಿ ಸೇರ್ಪಡೆ ಮಾಡಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲಿಸುವುದರಲ್ಲಿ ತಪ್ಪೇನಿಲ್ಲ. ಅಮಾಯಕರನ್ನು ಕೈ ಬಿಡುವುದು, ಆರೋಪಿಗಳನ್ನು ಸೇರ್ಪಡೆ ಮಾಡುವುದರಲ್ಲಿ ಯಾವುದು ತಪ್ಪಿಲ್ಲ ಎಲ್ಲದಕ್ಕೂ ದಾಖಲಾತಿಗಳು ಅವಶ್ಯಕ, ಅಮಾಯಕರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ಸ್ ಪಡೆಯುವುದರಲ್ಲಿ ತಪ್ಪೇನಿಲ್ಲ, ಎಲ್ಲವೂ ಕಾನೂನಡಿಯಲ್ಲಿ ಮಾಡಲಾಗುತ್ತದೆ ಹೊರತು ಯಾವುದು ಕಾನೂನು ವಿರುದ್ಧವಾಗಿ ಹೋಗುವುದಿಲ್ಲ ಎಂದು ಸಮರ್ಥಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಕಳೆದ ೭-೮ ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದ ಡಿಜಿಟಲ್ ರ‍್ವ ಸೆಂಟರ್ ಪ್ರಸ್ತುತ ಅಭಿವೃದ್ದಿ ಹೊಂದಿರುವ ಕುರಿತು ಪರಿಶೀಲನೆ ನಡೆಸಿ ಪ್ರಗತಿ ಸಾಧಿಸಿದ್ದಲ್ಲಿ ಇತರೆ ಜಿಲ್ಲೆಗಳಿಗೂ ಈ ವ್ಯವಸ್ಥೆಗಳನ್ನು ಆಳವಡಿಸುವ ಚಿಂತನೆ ನಡೆಸಿದೆ ಎಂದು ರಾಜ್ಯ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಡಿಜಿಟಲ್ ವ್ಯವಸ್ಥೆಯಿಂದ ಮನೆಯಿಂದಲೇ ತಜ್ಞ ವೈದ್ಯರನ್ನು ಮೊಬೈಲ್‌ಗಳ ಮೂಲಕವೇ ಸಂಪರ್ಕಿಸಿ ಚಿಕಿತ್ಸೆಗಳ ಸಲಹೆಗಳನ್ನು ಪಡೆಯಬಹುದಾಗಿದೆ. ಅವಶ್ಯಕವಾದವರಿಗೆ ವೈದ್ಯರ ಭೇಟಿಗೆ ಅನುವುಂಟಾಗಲಿದೆ. ಅನಾವಶ್ಯಕವಾದ ಆಸ್ಪತ್ರೆಗಳಿಗೆ ಅಲೆದಾಟ, ವೈದ್ಯರಿಗಾಗಿ ಕಾಯುವಿಕೆಯಿಂದ ಸಮಯ ವ್ಯರ್ಥ ಮಾಡುವಂತ ಸಮಸ್ಯೆಗಳು ಇರುವುದಿಲ್ಲ ಇದೆಲ್ಲಾವು ಡಿಜಿಟಲ್ ವ್ಯವಸ್ಥೆಯಿಂದ ಸಾಧ್ಯವಾಗುತ್ತಿರುವುದರಿಂದ ರೋಗಿಗಳಿಗೆ ಹೆಚ್ಚಿನ ಅನುವುಂಟಾಗಲಿದೆ ಎಂದು ವಿವರಿಸಿದರು.

ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಪ್ರಸಾದ್‌ಬಾಬು, ಜನ್ನಪ್ಪನಹಳ್ಳಿ ನವೀನ್, ಮೈಲಾಂಡ್ಲಹಳ್ಳಿ ಲೋಕೇಶ್, ವೈ.ಶಿವಕುಮಾರ್, ಕೆ.ಆರ್.ತ್ಯಾಗರಾಜ್ ಹಾಜರಿದ್ದರು.