ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯ ಕೋಲಾರದಿಂದ ಶ್ರೀನಿವಾಸಪುರಕ್ಕೆ ಹೋಗುವ ಸಂಪರ್ಕ ರಸ್ತೆ ಸುಮಾರು ವರ್ಷಗಳಿಂದ ಅಗಲೀಕರಣಗೊಳ್ಳದೆ ಹಾಗೂ ದುರಸ್ಥಿಯು ಕಾಣದೆ ಆಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ರಸ್ತೆ ಇದಾಗಿದ್ದು, ಕೋಲಾರದಿಂದ ಶ್ರೀನಿವಾಸಪುರಕ್ಕೆ ೩೫ ಕಿ.ಮೀ. ದೂರ ಇದ್ದರೂ ಒಂದು ಗಂಟೆಗೂ ಹೆಚ್ಚು ಕಾಲ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚು ಮಾವು ಮತ್ತು ಟೊಮೋಟೋ ಸೇರಿದಂತೆ ತರಕಾರಿ ಬೆಳೆಗಳು ಬೆಳೆಯುತ್ತಾರೆ. ಪ್ರತಿದಿನ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ನೂರಾರು ವಾಹನಗಳು ಮೂಲಕ ತರಕಾರಿಗಳನ್ನು ಸಾಗಿಸುತ್ತಾರೆ. ಹಾಗೂ ಆಂಧ್ರಪ್ರದೇಶದ ಮದನಪಲ್ಲಿ, ಪುಂಗನೂರಿಗೆ ಸಂಪರ್ಕ ರಸ್ತೆಯೂ ಇದಾಗಿದೆ.
ಪ್ರಪಂಚ ಪ್ರಸಿದ್ಧ ಮಾವಿನ ನಗರಿ ಎಂದು ಪ್ರಖ್ಯಾತಿ ಪಡೆದಿರುವ ಶ್ರೀನಿವಾಸಪುರದಲ್ಲಿ ಅತಿ ದೊಡ್ಡ ಮಾವಿನ ಮಾರುಕಟ್ಟೆಯೂ ಇದೆ. ಇನ್ನೇನು ಹತ್ತು ದಿನಗಳೊಳಗೆ ಮಾರುಕಟ್ಟೆ ಪ್ರಾರಂಭವಾಗುತ್ತದೆ. ಶ್ರೀನಿವಾಪುರ ಮಾವು ಮಾರುಕಟ್ಟೆಯಿಂದ ಹೊರ ರಾಜ್ಯ ಸೇರಿದಂತೆ ಹೊರ ದೇಶಗಳಿಗೂ ಮಾವು ಇಲ್ಲಿಂದ ರಫ್ತಾಗುತ್ತದೆ. ಆದರೆ ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಉತ್ತಮವಾದ ರಸ್ತೆಗಳು ಇಲ್ಲದಂತಾಗಿದೆ. ಮಾವಿನ ಸುಗ್ಗಿಗೆ ಪ್ರತಿದಿನ ಸಾವಿರಾರು ಲಾರಿಗಳು ಮಾವನ್ನು ಕೊಂಡೊಯ್ಯಲು ಮಾರುಕಟ್ಟೆಗೆ ಬರುತ್ತವೆ.
ರಾತ್ರಿ ವೇಳೆ ಲಾರಿಗಳು ಮಾವನ್ನು ತುಂಬಿಕೊAಡು ಸಂಚರಿಸುತ್ತವೆ. ಶ್ರೀನಿವಾಸಪುರದಿಂದ ಕೋಲಾರಕ್ಕೆ ಬರುವ ರಸ್ತೆ ಅಗಲೀಕರಣವೂಗೊಂಡಿಲ್ಲ. ದುರಸ್ಥಿಯುಗೊಂಡಿಲ್ಲ. ರಾತ್ರಿ ವೇಳೆ ಬರುವ ಲಾರಿಗಳು ರಸ್ತೆಯಲ್ಲಿ ಎದುರುಗಡೆ ಬರುವ ಚಿಕ್ಕ ವಾಹನಗಳಿಗೆ ದಾರಿ ಬಿಡದೆ ಅನೇಕ ಚಿಕ್ಕ ವಾಹನಗಳು ಅಪಘಾತಗಳಿಗೆ ಒಳಗಾಗಿವೆ.
ಇತ್ತೀಚೆಗೆ ನರಸಾಪುರ ಮತ್ತು ವೇಮಗಲ್ ಬಳಿ ಕೈಗಾರಿಕೆಗಳು ಸ್ಥಾಪನೆಯಾಗಿರುವ ಹಿನ್ನಲೆಯಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ಕಂಪನಿ ವಾಹನಗಳು ಪ್ರತಿದಿನ ಸಂಚರಿಸುತ್ತಿವೆ. ರಸ್ತೆ ಕಿರಿದಾಗಿರುವ ಕಾರಣ ಅಪಘಾತಗಳು ಸಂಭವಿಸುತ್ತಲೇ ಇವೆ. ಇರುವ ರಸ್ತೆಯು ದುರಸ್ಥಿ ಕಾಣದೆ ಮುದುವಾಡಿ ಕೆರೆ ಕೋಡಿ ಬಳಿ ರಸ್ತೆಯಲ್ಲಿ ಹಳ್ಳಗಳು ಬಿದ್ದು, ಮಳೆ ಬಂದರೆ ನೀರು ತುಂಬಿಕೊAಡು ರಸ್ತೆ ಕಾಣದಂತೆ ಆಗಿದೆ.
ಕೋಟ್
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಉತ್ತಮ ಸಂಪರ್ಕ ರಸ್ತೆಗಳು ಹಾಗೂ ಹಗಲೀಕರಣವೂ ಆಗಿದೆ. ಕೋಲಾರ ಶ್ರೀನಿವಾಸಪುರ ರಸ್ತೆ ಮಾತ್ರ ಅಗಲೀಕರಣಗೊಂಡಿಲ್ಲ. ಓಬಿರಾಯನ ಕಾಲದ ರಸ್ತೆಯಂತೆ ಕಾಣುತ್ತಿದೆ. ಶ್ರೀನಿವಾಸಪುರ ಕೋಲಾರ ರಸ್ತೆ ಆಂಧ್ರ ಪ್ರದೇಶದ ಸಂಪರ್ಕ ರಸ್ತೆಯೂ ಆಗಿದೆ. ಮಾವು ಸೇರಿದಂತೆ ತರಕಾರಿ ಬೆಳೆಗಳು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ತರಕಾರಿ ಮತ್ತು ಮಾವನ್ನು ಸಾಗಿಸಲು ಉತ್ತಮ ರಸ್ತೆ ಇಲ್ಲದಂತಾಗಿದೆ. ಜಿಲ್ಲಾ ಕೇಂದ್ರಕ್ಕೆ ಪ್ರತಿದಿನ ಸಾವಿರಾರು ಜನ ಶ್ರೀನಿವಾಸಪುರ ತಾಲ್ಲೂಕಿನಿಂದ ಬರುತ್ತಿದ್ದಾರೆ. ಅಲ್ಲದೆ ಬೆಂಗಳೂರಿಗೆ ಹೋಗಲು ಇದೇ ಪ್ರಮುಖ ರಸ್ತೆಯಾಗಿದೆ. ರಸ್ತೆ ಕಿರಿದಾಗಿರುವ ಕಾರಣ ಪ್ರತಿದಿನ ಅಪಘಾತಗಳು ಉಂಟಾಗುತ್ತಿವೆ. ಇದರಿಂದ ಸಾವು ನೋವುಗಳು ಸಂಭವಿಸುತ್ತವೆ. ರಸ್ತೆ ಅಗಲೀಕರಣ ಮಾಡುತ್ತೇವೆಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಕನಿಷ್ಟ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚುವ ಕೆಲಸವೂ ಅಧಿಕಾರಿಗಳು ಮಾಡುತ್ತಿಲ್ಲ.
-ಸಂಪತ್‌ಕುಮಾರ್, ರೈತ, ಕಿತ್ತಂಡೂರು.
ಕೋಟ್
ರಸ್ತೆ ಅಗಲೀಕರಣಕ್ಕೆ ಸಿಆರ್‌ಎಫ್ ನಿಧಿಯಿಂದ ೬ ಕೋಟಿ ಮತ್ತು ಎಸ್.ಹೆಚ್.ಜಿ.ಪಿ. ನಿಧಿಯಿಂದ ೧೦ ಕೋಟಿ ಮಂಜೂರಾಗಿದೆ. ಟೆಂಡರ್ ಹಂತಕ್ಕೆ ಹೋಗಿತ್ತು. ಕೆಲವು ಕಾರಣಾಂತರಕಗಳಿAದ ಟೆಂಡರ್ ರದ್ದಾಗಿದೆ. ಮರು ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೆ ಎರಡು ಅನುದಾಗಳಿಂದ ಸುಮಾರು ೧೦ ಕಿ.ಮೀ ಗೂ ಹೆಚ್ಚು ರಸ್ತೆಯನ್ನು ಅಭಿವೃದ್ಧಿಪಡಿಸಬಹುದಾಗಿದೆ.
-ರಾಮಮೂರ್ತಿ, ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೋಲಾರ.
ಚಿತ್ರ ೧೧ ಕೆ.ಎಲ್.ಆರ್. ೦೪ : ಕೋಲಾರ ಶ್ರೀನಿವಾಸಪುರ ರಸ್ತೆಯ ಮುದುವಾಡಿ ಕೆರೆ ಕೋಡಿಯ ಬಳಿ ರಸ್ತೆ ದುರಸ್ಥಿ ಆಗದೇ ಇರುವುದು.
ಚಿತ್ರ ೧೧ ಕೆ.ಎಲ್.ಆರ್. ೦೪ಎ : ಕೋಲಾರ ಶ್ರೀನಿವಾಸಪುರದ ಮಧ್ಯೆ ಇರುವ ಕಿರಿದಾದ ರಸ್ತೆ.
ಚಿತ್ರ ೧೧ ಕೆ.ಎಲ್.ಆರ್. ೦೪ಬಿ : ಸಂಪತ್‌ಕುಮಾರ್, ರೈತ, ಕಿತ್ತಂಡೂರು.
ಚಿತ್ರ ೧೧ ಕೆ.ಎಲ್.ಆರ್. ೦೪ಸಿ : ರಾಮಮೂರ್ತಿ, ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಕೋಲಾರ.