ನ್ಯೂಸ್

ಅಫಜಲಪುರದಲ್ಲಿ ಪಕ್ಷೇತರ ಅಭ್ಯರ್ಥಿ ನಿತೀನ, ಜೇವರ್ಗಿಯಲ್ಲಿ ಅಜಯಸಿಂಗ್ ಮುನ್ನಡೆ

ಅಫಜಲಪೂರ: ಪಕ್ಷೇತರ ಅಭ್ಯರ್ಥಿ ಮುನ್ನಡೆ

ಕಲಬುರಗಿ: ಸಹೋದರರ ಸವಾಲ್ ದಿಂದ ರಾಜ್ಯದ ಗಮನ ಸೆಳೆದ ಅಫಜಲಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ನಿತೀನ ಗುತ್ತೇದಾರ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಸಹೋದರ, ಮಾಜಿ ಸಚಿವ ಬಿ.ಜೆ.ಪಿ. ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರಗಿಂತ 1262 ಮತಗಳಿಂದ ಮೊದಲ ಸುತ್ತಲಿನ ಮುನ್ನಡೆ ಸಾಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಡಾ. ಶರಣಪ್ರಕಾಶ 2000 ಮುನ್ನಡೆ ಸಾಧಿಸಿದ್ದರೆ
ಗುಲ್ಬರ್ಗಾ ದಕ್ಷಿಣ ದಲ್ಲಿ ಕಾಂಗ್ರೆಸ್‌ ನ ಅಲ್ಲ ಮಪ್ರಭು ಪಾಟೀಲ್ 1700 ಮುನ್ನಡೆ ಸಾಧಿಸಿದ್ದಾರೆ. ಚಿತ್ತಾಪುರ ದಲ್ಲಿ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ, ಜೇವರ್ಗಿಯಲ್ಲಿ ಡಾ.‌ಅಜಯಸಿಂಗ್, ಕಲಬುರಗಿ ಗ್ರಾಮೀಣದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು, ಕಲಬುರಗಿ ಉತ್ತರದಲ್ಲಿ ಬಿಜೆಪಿಯ ಚಂದು ಪಾಟೀಲ್, ಆಳಂದದಲ್ಲಿ ಕಾಂಗ್ರೆಸ್ ಬಿ.‌ಆರ್ ಪಾಟೀಲ್ ಹಾಗೂ ಬಿಜೆಪಿಯ ಸುಭಾಷ ಗುತ್ತೇದಾರ ನೇರ ಹಣಾಹಣಿ ನಡೆದಿದೆ.‌ಬಿ.ಆರ್.‌ಪಾಟೀಲ್ ಕೇವಲ 50 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.