ಹಿಂದುಸ್ಥಾನ್ ಏರೋ ನಾಟಿಕ್ಸ್(ಲಿ) ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ರವರಿಂದ ಫಿಟ್ಟರ್ ಟರ್ನರ್ ಮೇಷಿನಿಷ್ಟ್ ಎಲೆಕ್ಟಿçಷಿಯನ್, ವೆಲ್ಡರ್, COPA, ಕಾರ್‌ಪೆಂಟರ್, ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್, ಟೂಲ್ & ಡೈ ಮೇಕರ್, ಸಿ.ಎನ್.ಸಿ. ಪ್ರೋಗ್ರಾಮ್ ಕಂ ಆಪರೇಟರ್, ಎಂ.ಆರ್.ಎ.ಸಿ. ಟ್ರೇಡ್‌ಗಳಿಗೆ ಫುಲ್ ಟರ್ಮ್ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ ಎನ್.ಆರ್.ಮೊಹಲ್ಲಾ ಮೈಸೂರು ಇವರ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಈ ಕಚೇರಿಗೆ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26 ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ತೇರ್ಗಡೆ ಹೊಂದಿರಬೇಕು, ಖಡ್ಡಾಯವಾಗಿ apprenticeshipindia.org/candidate-registration ನಲ್ಲಿ ನೋಂದಾಯಿಸಿ ಅರ್ಜಿ ನಮೂನೆಯಲ್ಲಿ ಅಪ್ರೆಂಟಿಸ್ ನೋಂದಣಿ ಸಂಖ್ಯೆ ನಮೂದಿಸಬೇಕು, ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಸ್ಟೇಫಂಡ್ (ಸರ್ಕಾರ ನಿಗಧಿ ಪಡಿಸಿದಂತೆ) ನೀಡಲಾಗುತ್ತದೆ.
ಅಭ್ಯರ್ಥಿಯು ಅರ್ಜಿಯೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ಆಳತೆಯ ಭಾವಚಿತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ, ಐಟಿಐ ಅಂಕಪಟ್ಟಿಗಳ ಪ್ರತಿ, NTC ನಕಲು(ನ್ಯಾಷನಲ್ ಟ್ರೇಡ್ ಸರ್ಟಿಫಿಕೆಟ್), ಜಾತಿ/ವಿಕಲಚೇತನ/ಮಾಜಿ ಸೈನಿಕ ಅವಲಂಬಿತ ಪ್ರಮಾಣ ಪತ್ರದ ಪ್ರತಿ , ಆಧಾರ್ ಕಾರ್ಡ್, ಮತ್ತು ಪ್ಯಾನ್ ಕಾರ್ಡ್/ಇ-ಪ್ಯಾನ್ ಪ್ರತಿ, Copy of NCVT MIS portal Registration ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮೈಸೂರು, ಇವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂ. ಸಂ: 0821-2489972 ನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರಾದ ಡಿ.ಎಂ.ರಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.