ಕೆ.ಆರ್.ನಗರ: ಅಪಘಾತರಹಿತ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಕೆಎಸ್‌ಆರ್‌ಟಿಸಿಯ ಕೆ.ಆರ್.ನಗರ ಘಟಕದ ಏಳು ಚಾಲಕರನ್ನು ಶಾಸಕ ಡಿ.ರವಿಶಂಕರ್ ಸನ್ಮಾನಿಸಿದರು.
ಪಟ್ಟಣದ ಡಾ.ರಾಜ್‌ಕುಮಾರ್ ಬಾನಾಂಗಳದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಚಾಲಕರಾದ ಎಚ್.ಸಿ.ನಾಗರಾಜು, ಎಂ.ಜೆ.ಚೆಲುವರಾಜು, ಎಚ್.ಎ.ದೇವೇಗೌಡ, ಎನ್.ಕೆ.ಹರೀಶ್, ಕೆ.ಎಸ್.ಮಹದೇವ್, ವಿ.ಎನ್.ರಮೇಶ್ ಮತ್ತು ಈರಪ್ಪ ನವಲೂರು ಅವರಿಗೆ ಬೆಳ್ಳಿ ಪದಕ, 2 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಯಿತು.
ಘಟಕ ವ್ಯವಸ್ಥಾಪಕ ಡಿ.ಮಹೇಶ್ ಮಾತನಾಡಿ, ಸಂಸ್ಥೆ ವತಿಯಿಂದ ಅಪಘಾತ ರಹಿತ ಚಾಲನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಪ್ರಯಾಣಿಕ ಸ್ನೇಹಿಯಾಗಿ ಕೆಲಸ ಮಾಡಿದ ಚಾಲಕರನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಎಚ್.ಕೆ.ಸತೀಶ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ನಟರಾಜ್, ಶಿವುನಾಯಕ್, ಕೆಎಸ್‌ಆರ್‌ಟಿಸಿ ಘಟಕದ ಮೇಲ್ವಿಚಾರಕ ಸುಬ್ರಮಣ್ಯ, ಲೆಕ್ಕಪತ್ರ ಮೇಲ್ವಿಚಾರ ಕೆ.ಭಾಸ್ಕರ್, ಸಂಚಾರಿ ನಿರೀಕ್ಷಕ ಕಿಶೋರ್, ಸಹ ಸಂಚಾರಿ ನಿಯಂತ್ರಕ ಡಿ.ಎಸ್.ರವಿ, ಕೆಎಂಪಿಎಲ್ ಮಾಸ್ಟರ್ ಪಿ.ಎ.ಪುಟ್ಟರಾಜು ಇ ತರರು ಇದ್ದರು.