ನ್ಯೂಸ್

ಅಪಘಾತದಲ್ಲಿ ಬೈಕ್​ ಸವಾರ ಸಾವು

ಚಿಂತಾಮಣಿ: ಬೆಂಗಳೂರು ರಸ್ತೆಯ ತಳಗವಾರ ಸಮೀಪ ಟ್ರಾಕ್ಟರ್​ ಹಿಂಭಾಗದ ಟ್ರಾಲಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕೋಲಾರ ತಾಲೂ ಕಿನ ಕ್ಯಾಲನೂರು ಸಮೀಪದ ಚನ್ನಸಂದ್ರ ಗ್ರಾಮದ ಸಂಚಲಪ್ಪ (50)ಮೃತ. ಟ್ರಾಕ್ಟರ್​ ​ ಭಾನುವಾರ ರಾತ್ರಿ ಹೊಸಹಳ್ಳಿಯಿಂದ ತಳಗವಾರ ಮೂಲಕ ಕೈವಾರಕ್ಕೆ ಹೋಗುತ್ತಿದ್ದರೆ, ಬೈಕ್​ ಸವಾರ ಚನ್ನಸಂದ್ರದಿಂದ ಕೈವಾರಕ್ಕೆ ಹೋಗುತ್ತಿದ್ದ ಎನ್ನಲಾಗಿದೆ. ತಳಗವಾರ ಸಮೀಪದ ರಸ್ತೆ ಉಬ್ಬುಗಳಲ್ಲಿ ಟ್ರಾಕ್ಟರ್​ ​ ಚಾಲಕ ನಿಧಾನವಾಗಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್​ ಟ್ರಾಲಿಗೆ ಡಿಕ್ಕಿಯಾಗಿದೆ. ನಾಗರಾಜ್​ ತಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕೈವಾರ ಹೊರಠಾಣೆಯ ಎಎಸ್​ಐ ಪ್ರಕಾಶ್​ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತ ದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಬೈಕ್​ ವಶಕ್ಕೆ ಪಡೆದಿದ್ದಾರೆ. ಇನ್ನು ಟ್ರಾಕ್ಭಯದಿಂದ ವಾಹನ ನಿಲ್ಲಿಸದೆ ಗ್ರಾಮಕ್ಕೆ ತೆರಳಿದ್ದ. ಟ್ರಾಕ್ಟರ್​ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.