ನ್ಯೂಸ್

ಅಪಘಾತದಲ್ಲಿ ಅತಿಥಿ ಉಪನ್ಯಾಸಕಿ ಸಾವು

ಮುಳಬಾಗಿಲು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ &75ರ ಗುಟ್ಟಹಳ್ಳಿ ಸಮೀಪ ಬುಧವಾರ ರಸ್ತೆ ವಿಭಜಕಕ್ಕೆ ದ್ವಿಚಕ್ರವಾಹನ ಡಿಕ್ಕಿಯಾಗಿ ಅತಿಥಿ ಉಪನ್ಯಾಸಕಿ ಸ್ವಪ್ನಾ (35) ಮೃತಪಟ್ಟಿದ್ದಾರೆ.ಮೂಲತ@ ಚಿಂತಾಮಣಿಯವರಾಗಿದ್ದು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ಮುಗಿಸಿಕೊಂಡು ಕೆಲಸದ ನಿಮಿತ್ತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಹೋಗಿ ವಾಪಸ್​ ಮುಳಬಾಗಿಲಿನ ಹೌಸಿಂಗ್​ ಬೋರ್ಡ್​ನ ಮನೆಗೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿಗಿ ಸ್ಥಳದಲ್ಲೆ ಅಸುನೀಗಿದ್ದಾರೆ.ಮೃತರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ. ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.