ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಲ್ಲಿನ ಅನ್ವೇಷಣಾ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ ದೊರೆತಿದ್ದು, ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಎಚ್.ಕೆ.ಚಂದ್ರಮೋಹನ್ ಹರ್ಷವ್ಯಕ್ತಪಡಿಸಿದ್ದಾರೆ.
ಶಾಲೆಯ ವಿದ್ಯಾರ್ಥಿ ಡಿ.ಯಶಸ್ 602 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಪ್ರತೀಕ್ ರಿಚರ್ಡ್ 593, ನಿತ್ಯಶ್ರೀ 582, ಸೌಜನ್ಯ 570 , ಪ್ರಾರ್ಥನಾ 569, ನೂತನ್ 552, ರಾಕೇಶ್ 543, ಪಾವನಾ 539, ರಿತೇಶ್ ಧನ್ವಿನ್ 538 ಅಂಕಗಳಿಸುವ ಮೂಲಕ ಅತ್ಯನ್ನುತ ದರ್ಜೆಯಲ್ಲಿ ಪಾಸಾಗಿದ್ದಾರೆ.
23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, ಶೇ. 91 ಫಲಿತಾಂಶ ಶಾಲೆಗೆ ದೊರೆತಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾನಂದೀಶ್ ತಿಳಿಸಿದ್ದಾರೆ.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಬಹಳ ಶಿಸ್ತಿನಿಂದ ನಡೆದಿದ್ದು, ಅದರಲ್ಲಿ ನಮ್ಮ ಮಕ್ಕಳು ಗುಣಮಟ್ಟದ ಫಲಿತಾಂಶ ನೀಡುವ ಮೂಲಕ ಶಾಲೆಗೆ ಹೆಸರು ತಂದುಕೊಟ್ಟಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಚ್.ಸಿ. ಪ್ರಶಾಂತ್ ಹಾಗೂ ಅಧ್ಯಕ್ಷ ಎಚ್.ಎನ್.ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನ್ವೇಷಣಾ ಪಬ್ಲಿಕ್ ಶಾಲೆಯ ಶಿಕ್ಷಕರಾದ ರವಿಚಂದ್ರ, ಖುತೇಜ, ಕಾವ್ಯಾ, ಶ್ವೇತಾ, ಸೌಂದರ್ಯ ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.