ವಿಜಯವಾಣಿ ಸುದ್ದಿಜಾಲ ಕೋಲಾರ
ಅನ್ನಭಾಗ್ಯ ಯೋಜನೆಯಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಮಾರ್ಚ್ ತಿಂಗಳಿನಿAದ ೫ ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುತ್ತಿದ್ದು, ಫ್ರೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳಿಗೂ ಸೇರಿ ಪ್ರತಿ ಕುಟುಂಬ ಸದಸ್ಯನಿಗೆ ೧೫ ಕೆ.ಜಿ.ಅಕ್ಕಿಯನ್ನು ಈ ತಿಂಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳವರು ಫಲಾನುಭವಿಗಳಿಗೆ ಲೋಪ ಮಾಡಿರುವುದು ಕಂಡುಬAದರೆ ಅವರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿರುವ ಗ್ಯಾರಂಟಿ ಯೋಜನೆಗಳ ಕಛೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಹಿಂದೆ ೫ ಅಕ್ಕಿ ಜೊತೆಗೆ ಹೆಚ್ಚುವರಿ ೫ ಕ.ಎಜಿ. ಅಕ್ಕಿಗೆ ಹಣ ನೀಡಲಾಗುತ್ತಿತ್ತು. ಮಾರ್ಚ್ ತಿಂಗಳಿನಿAದ ಪ್ರತಿ ಕುಟುಂಬ ಸದಸ್ಯನಿಗೆ ೧೦ ಕೆ.ಜಿ.ಅಕ್ಕಿಯನ್ನು ನೀಡಲಾಗುತ್ತಿದೆ. ಅಂತ್ಯೋದಯ ಯೋಜನೆಯ ಕಾರ್ಡುದಾರರಿಗೆ ಕುಟುಂಬ ಸದಸ್ಯರು ೦೩ ಜನ ಇದ್ದರೆ ೩೫ ಕೆ.ಜಿ. ನೀಡಲಾಗುವುದು. ಅದಕ್ಕೂ ಹೆಚ್ಚು ಜನ ಇದ್ದರೆ ಅದಕ್ಕೆ ತಕ್ಕ ಹಾಗೆ ಅಕ್ಕಿಯನ್ನು ನೀಡಲಾಗುತ್ತಿದೆ. ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲ ಕೇಳಿ ಪಡೆಯಬೇಕು. ನ್ಯಾಯಬೆಲೆ ಅಂಗಡಿಯವರು ಇದರಲ್ಲಿ ವ್ಯತ್ಯಾಸ ಮಾಡಿದರೆ ಗ್ಯಾರಂಟಿ ಯೋಜನೆಯ ಕಛೇರಿಗೆ ದೂರು ನೀಡಬಹುದು. ಪ್ರತಿ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಕಛೇರಿಗಳನ್ನು ಪ್ರಾರಂಭಿಸಲಾಗಿದೆ ಎಂದರು.
ನ್ಯಾಯಬೆಲೆ ಅಂಗಡಿಗಳವರು ಅಕ್ಕಿ ವಿತರಣೆ ಮಾಡುವಲ್ಲಿ ನಿಯಮಗಳ ಪ್ರಕಾರ ಅಂಗಡಿಯನ್ನು ತೆರೆದು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಅಕ್ಕಿ ತರಣೆ ಮಾಡಬೇಕು. ಹೆಚ್ಚುವರಿ ಅಕ್ಕಿ ಬರುತ್ತಿದೆ ಎಂದು ಫಲಾನುಭವಿಗಳು ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡುಬAದರೆ ಅಂಥವರ ಕಾರ್ಡ್ನ್ನು ರದ್ದುಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ೩,೧೧,೪೬೧ ಬಿ.ಪಿ.ಎಲ್ ಮತ್ತು ಅಂತ್ಯೋದಯ ಫಲಾನುಭವಿಗಳು ಇದ್ದು, ಸರ್ಕಾರ ಯೋಜನೆ ಪ್ರಾರಂಭಿಸಿದ ೧೭ ತಿಂಗಳಿನಿAದ ೫ ಕೆ.ಜಿ. ಅಕ್ಕಿ ಬದಲಾಗಿ ೧೮,೫೨,೭೦,೦೮೦ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
ಗೃಹಲಕ್ಷಿö್ಮÃ ಯೋಜನೆ :
ಗೃಹಲಕ್ಷಿö್ಮÃ ಯೋಜನೆಯಲ್ಲಿ ಫಲಾನುಭವಿಗಳ ಸಂಖ್ಯೆ ೫೦,೯೦,೦೦೭ ಆಗಿದ್ದು, ಡಿಸೆಂಬರ್ ೨೦೨೪ರ ಮಾಹೆಯಿಂದ ಒಟ್ಟು ೧೭ ತಿಂಗಳಿಗೆ ೧೦೧೮.೦೦ ಕೋಟಿ ರೂ.ಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಅಗಿದೆ. ಜನವರಿ ಮತ್ತು ಫೆಬ್ರವರಿ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕಾಗಿದೆ ಎಂದರು.
ಇದರ ಜೊತೆಗೆ ಶಕ್ತಿ ಯೋಜನೆ, ಗೃಹಜ್ಯೋತಿ, ಯುವನಿಧಿ ಯೋಜನೆಯಿಂದಲೂ ಫಲಾನುಭವಿಗಳಿಗೆ ಇದರ ಪ್ರಯೋಜನೆವನ್ನು ನೀಡುತ್ತಿದ್ದಾರೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಸಂದಾಯವಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ವಿರೋಧಪಕ್ಷದವರು ವಿನಾಕಾರಣ ಗ್ಯಾರಂಟಿ ಯೋಜನೆಗಳಿಂದ ಅನಾನುಕೂಲ ಆಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಕ್ಕ ವಿತರಣೆಯಲ್ಲಿ ಕಡಿಮೆ ನೀಡಿದಲ್ಲಿ ಗ್ಯಾರಂಟಿ ಯೋಜನೆಗಳ ಸದಸ್ಯರ ಗಮನಕ್ಕೆ ಫಲಾನುಭವಿಗಳು ತರಬೇಕು ಎಂದು ತಿಳಿಸಿದರು.
ಚಿತ್ರ ೨೨ ಕೆ.ಎಲ್.ಆರ್. ೦೩ : ವೈ ಶಿವಕುಮಾರ್ ರವರ ಭಾವಚಿತ್ರ