ನ್ಯೂಸ್

ಅನ್ನದಾತರು ಉಗ್ರಗಾಮಿಗಳಲ್ಲ/ ಅರಣ್ಯ ಇಲಾಖೆಯವರು ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಿಲ್ಲಬೇಕು/ ಸಂಸದ ಮುನಿಸ್ವಾಮಿ

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ

ಅನ್ನದಾತರು ಉಗ್ರಗಾಮಿಗಳು ಅಲ್ಲ. ಅನ್ನದಾತರು ಭೂಗಳ್ಳರು ಅಲ್ಲ. ಯಾರು ೨೦, ೩೦, ೪೦ ಎಕರೆಗಳಷ್ಟು ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿರುವವರನ್ನು ತೆರವು ಮಾಡಲಿ, ೨೦, ೩೦ ಗುಂಟೆಯಷ್ಟು ಜಮೀನನ್ನು ಭೂ ಮಂಜೂರಾತಿಯಲ್ಲಿ ಕಂದಾಯ ಇಲಾಖೆ ನೀಡಿರುವ ದಾಖಲೆಗಳನ್ನು ಹೊಂದಿರುವ ರೈತರ ಜಮೀನಿನಲ್ಲಿ ರಾತ್ರೋ ರಾತ್ರಿ ಅರಣ್ಯ ಇಲಾಖೆಯವರು ಬೆಳೆ ಸಮೇತ ತೆರವು ಮಾಡಿರುವುದನ್ನು ಸಹಿಸಲಾಗದು ಎಂದು ಸಂಸದ ಮುನಿಸ್ವಾಮಿ ಎಚ್ಚರಿಗೆ ನೀಡಿದರು.

ಅರಣ್ಯ ಇಲಾಖೆಯವರು ರೈತರ ಜಮೀನುಗಳನ್ನು ತೆರವು ಮಾಡಿರುವ ಜಾಗಕ್ಕೆ ಬಿಜೆಪಿ ರಾಜಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇದೇ ಕಾಂಗ್ರೆಸ್ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದಿತ್ತು, ಸಿದ್ದರಾಮಯ್ಯ ಸರ್ಕಾರವೇ ರೈತರಿಗೆ ಜಮೀನು ಮಂಜೂರಾತಿ ನೀಡಿದೆ. ವಿವಿಧ ಯೋಜನೆ ಮೂಲಕ ಉಚಿತ ಕೊಳವೆ ಭಾವಿಗಳನ್ನು ಸಹ ಕೊರಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಫಹಣಿ ಹೊಂದಿರುವವರು ಪಡೆದಿದ್ದಾರೆ. ೩೦-೪೦ ವರ್ಷಗಳಿಂದ ಸದರಿ ಜಮೀನುಗಳಲ್ಲಿ ಮಾವಿನ ಮರಗಳು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದರು. ರಾಜಕೀಯ ದುರುದ್ದೇಶಕ್ಕೆ ಕಟ್ಟುಬಿದ್ದಿರುವ ಅರಣ್ಯ ಇಲಾಖೆ ಈ ರೀತಿಯಾದ ಕಾರ್ಯಾಚರಣೆಗಳನ್ನ ಹಮ್ಮಿಕೊಂಡಿದೆ ಎಂದರು.

೧ ಎಕರೆ, ಅರ್ಧ ಕುಂಟೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವವರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ರೈತರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕು ಅದನ್ನ ಬಿಟ್ಟು ರೈತರ ಮೇಲೆ ದಬ್ಭಾಳಿಕೆ ಮಾಡುತ್ತಿರುವುದು ಎಷ್ಟ ಸಮಂಜಸ ಎಂದು ಪ್ರಶ್ನಿಸಿದರಲ್ಲದೆ, ರೈತರಿಗೆ ನ್ಯಾಯ ದೊರಕಿಸುವ ನಿಟ್ಟನಲ್ಲಿ ರೈತರ ಪರವಾಗಿ ಜೈಲು ವಾಸ ಅನುಭವಿಸಲು, ರೈತರಿಗಾಗಿ ಪ್ರಾಣತ್ಯಾಗ ಮಾಡಲು ನಾವು ಸಿದ್ದರಿದ್ದೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡಿ, ಯಾವುದೇ ಒಂದು ಸರ್ಕಾರ ರೈತರ ಹಿತವನ್ನು ಕಾಪಾಡಬೇಕು, ರೈತರೊಂದಿಗೆ ಮಾತುಕತೆ ನಡೆಸದೆ ತೆರವು ಮಾಡಲು ನೋಟೀಸ್ ನೀಡದೇ ರೈತರ ಮೇಲೆ ದಬ್ಬಾಳಿಕೆ ಮಾಡಿರುವುದು ಸರಿಯಲ್ಲ. ಅರಣ್ಯ ಇಲಾಖೆಗೆ ಸೇರಿದ್ದಾದರೂ ರೈತರಿಗೆ ತಿಳಿಸಿ ದಾಖಲಾತಿಗಳನ್ನು ಪರಿಶೀಲಿಸಿ ನಂತರ ತೆರವಿಗೆ ಗಡುವು ನೀಡಿ ತೆರವು ಮಾಡಬೇಕಾಗಿತ್ತು. ಅದನ್ನು ಬಿಟ್ಟು ದಬ್ಬಾಳಿಕೆ ಮಾಡಿರುವುದು ಸರಿಯಲ್ಲ.

ಸರ್ಕಾರವು ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು. ರೈತರ ಪರವಾಗಿ ನಾವಿದ್ದೇವೆ ರೈತರ ಹಾಗು ಸಂಸದರ ಮೇಲೆ ಕೇಸು ದಾಖಲಿಸಿರುವುದನ್ನ ಹಿಂಪಡಯಬೇಕು. ರೈತ ವಿರೋಧಿ ನೀತಿಗಳನ್ನು ಹಿಂಪಡಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಪಡೆದು, ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಬಾಕ್ಸ್

ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಭೂಮಿ ಮತ್ತು ಬೆಳೆಯನ್ನು ಕಳೆದುಕೊಂಡ ನಾರವಮಾಕಲಹಳ್ಳಿ ಗ್ರಾಮದ ರೈತ ರಾಜ್ಯ ಬಿಜೆಪಿ ಅಧ್ಯಕ್ಷರ ಮುಂದೆ ಕಣ್ಣೀರಿಟ್ಟು ನನಗೆ ಇದಿದ್ದು ೪ ಎಕರೆ ಜಮೀನು, ಕಂದಾಯ ಇಲಾಖೆಯವರೇ ದಾಖಲೆಗಳನ್ನು ನೀಡಿದ್ದಾರೆ. ೪೦ ವರ್ಷದಿಂದ ಸ್ವಾಧೀನದಲ್ಲಿದ್ದೇನೆ. ಏಕಾಏಕಿ ನನ್ನ ಬೆಳೆ ಮತ್ತು ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಂಗಲಾಚಿಕೊAಡ.

ಬಾಕ್ಸ್

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈತರ ಜಮೀನುಗಳನ್ನು ವೀಕ್ಷಣೆ ಮಾಡಲು ಬಂದಾಗ ತೋಟಗಳ ಬಳಿ ರೈತರನ್ನು ಪೋಲಿಸರು ಬಿಡದಿದ್ದಕ್ಕೆ ಸಂಸದ ಮುನಿಸ್ವಾಮಿ ಪೋಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್, ಬಿಜೆಪಿ ಮುಖಂಡರಾದ ರೋಣೂರು ಚಂದ್ರಶೇಖರ್, ಗಂಜೂರು ಶ್ರೀನಿವಾಸರೆಡ್ಡಿ ಹಾಗೂ ರೈತರು ಉಪಸ್ಥಿತರಿದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೧ : ಕೇತುಗಾನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯವರಿಂದ ಭೂಮಿ ಮತ್ತು ಬೆಳೆಗಳನ್ನು ಕಳೆದುಕೊಂಡ ಜಾಗದಲ್ಲಿ ನಾರವಮಾಕಲಹಳ್ಳಿ ಗ್ರಾಮದ ರೈತರ ತನ್ನ ದಾಖಲೆಗಳನ್ನು ಬಿಜೆಪಿ ರಾಧ್ಯಕ್ಷರಿಗೆ ಮತ್ತು ಸಂಸದರಿಗೆ ನೀಡಿ, ತನ್ನ ಎರಡು ಕೈಗಳಿಂದ ನೆತ್ತಿಗೆ ಹೊಡೆದುಕೊಂಡು ರೋಧಿಸುತ್ತಿರುವುದು.