ಯಾದಗಿರಿ: ಬಾಬೂಜಿ ಅವರು ಅಂದು ದೇಶಕ್ಕೆ ಕೃಷಿಯ ಮಹತ್ವವನ್ನು ಸಾರಿ ರೈತರಲ್ಲಿ ಅರಿವು ಮೂಡಿಸಿದರು. ಅನ್ನದ ಮಹತ್ವವನ್ನು ದೇಶಕ್ಕೆ ಸಾರಿದರು. ಇದರಿಂದ ಅವರು ಹಸಿರುಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದಾರೆ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ತಿಳಿಸಿದರು.
ನಗರದ ಜಿಲ್ಲಾಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರದಲ್ಲಿ ಆಯೋಜಿಸಿದ್ದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದಾಗಿ ಜಗಜೀವನರಾಮ್ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಯುವ ಜನಾಂಗ ದೇಶದ ಇತಿಹಾಸ ಅಧ್ಯಯನ ಮಾಡಬೇಕು. ದೊಡ್ಡ ದೊಡ್ಡ ಸಾಧಕರ ಜೀವನ ಚರಿತ್ರೆಯನ್ನು ಅರಿಯಲು ಮುಂದಾಗಬೇಕು. ಇದರಿಂದ ನೀವು ಉನ್ನತ ಗುರಿ ತಲುಪಲು ಸಹಕಾರಿಯಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಕ್ಕಿದೆ ಎಂದರೆ ಅದು ಇಂಥ ನಾಯಕರ ಪ್ರಯತ್ನದ -ಲವಾಗಿದೆ. ಆದ್ದರಿಂದ ಮಹಾನ್ ನಾಯಕರ ತತ್ವಾದರ್ಶಗಳನ್ನು ಯುವ ಜನಾಂಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಬೂಜಿ ಅವರು ಸೃಷ್ಠಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು.ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರು. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ಶೋಷಣೆ ಮುಕ್ತ ಸಮಾಜದ ನಿಮರ್ಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಮಾಜ ಕಲ್ಯಾಣ ಇಲಾಖೆ ಉಪ ನಿದರ್ೇಶಕಿ ಸರೋಜಾ ಜಿ.ಟಿ., ಸಹಾಯಕ ನಿದರ್ೇಶಕ ಸಂಗಪ್ಪ ಪೂಜಾರಿ, ವ್ಯವಸ್ಥಾಪಕ ರಂಗಣ್ಣ , ಜವಳಿ ಮತ್ತು ಕೈಮಗ್ಗ ಇಲಾಖೆ ಅಕಾರಿ ಅಜಿತ್ ನಾಯಕ, ಸಮಾಜದ ಮುಖಂಡರಾದ ಲಿಂಗಪ್ಪ ಹತ್ತಿಮನಿ, ಲಿಂಗಪ್ಪ ವಡ್ನಳ್ಳಿ, ಭೀಮಾಶಂಕರ ಆಲ್ದಾಳ, ಆಂಜನೇಯ ಬಬಲಾದ ಇದ್ದರು.