ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲಾ ಕಾಂಗ್ರೇಸ್ ಸಭೆಯಲ್ಲಿ ಶನಿವಾರ ಜಿಲ್ಲಾಧ್ಯಕ್ಷರ ಮೇಲೆ ನಡೆದ ಹಲ್ಲೆಗೆ ಸಂಬAಧಿಸಿದAತೆ ಭಾನುವಾರ ಕೋಲಾರ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಕುಂಬಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲು ಮುಂದಾದ ಸಮುದಾಯದ ಮುಖಂಡ ಮತ್ತು ಪೋಲಿಸರ ನಡುವೆ ವಾಗ್ವಾದ ನಡೆದು ಪ್ರತಿಭಟನೆಗೆ ಮುಂದಾದ ಕುಂಬಾರ ಸಂಘದ ಮುಖಂಡರನ್ನು ಪೋಲಿಸರು ವಶಕ್ಕೆ ಪಡೆದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕುರುಬರ ಸಮುದಾಯದವರಾಗಿದ್ದು, ಅವರ ಮೇಲೆ ಶನಿವಾರ ನಗರದ ಹೊರ ವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಹಲ್ಲೆ ನಡೆದಿದೆ. ಇದಕ್ಕೆ ಎಂ.ಎಲ್.ಸಿ. ಅನಿಲ್‌ಕುಮಾರ್ ಕಾರಣ ಎಂದು ಅನಿಲ್ ಕುಮರ್ ರವರ ಪ್ರತಿಕೃತಿಯನ್ನು ಬಸ್ ನಿಲ್ದಾಣದ ವೃತ್ತದಲ್ಲಿ ದಹನ ಮಾಡಿ, ಪ್ರತಿಭಟನೆ ಮಾಡಲು ಮುಂದಾಗಿ ಘೋಷಣೆಯನ್ನು ಕೂಗುತ್ತಿದ್ದಾಗ ಕುಂಬಾರ ಸಂಘದ ಮುಖಂಡರ ಮತ್ತು ಪೋಲಿಸರ ಮಧ್ಯೆ ವಾಗ್ವಾದ ನಡೆಯಿತು.
ಅನುಮತಿ ಪಡೆಯದೆ ಪ್ರತಿಭಟನೆಗೆ ಮುಂದಾಗಿದ್ದೀರಿ. ಪ್ರತಿಭಟನೆ ಮಾಡಬೇಕಾದರೆ ಪೋಲಿಸರಿಂದ ಅನುಮತಿ ಪಡೆಯಬೇಕಾಗಿತ್ತು. ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ ಎಂದು ಪೋಲಿಸರು ಕುಂಬಾರ ಸಂಘದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ ಕಾರಣ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಲು ಮುಂದಾದ ಶ್ರೀನಿವಾಸಪುರದ ಕುಂಬಾರ ಸಮುದಾಯದ ವೇಣುಗೋಪಾಲ್ ರವರನ್ನು ಪೋಲಿಸರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ನಿಮ್ಮ ಸಮುದಾಯದ ಮುಖಂಡ ಹಾಗೂ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣರ ಮೇಲೆ ಹಲ್ಲೆಯಾಗಿದ್ದರೆ ಕಾನೂನು ರೀತಿಯಾಗಿ ಹೋರಾಟ ನಡೆಸಿ, ಪೋಲಿಸರ ಅನುಮತಿ ಇಲ್ಲದೆ ರಸ್ತೆಯಲ್ಲಿ ಪ್ರತಿಭಟನೆ ಮಾಡುವುದು ಸರಿಯಿಲ್ಲ ಎಂದು ವೇಣು ಸೇರಿದಂತೆ ಕೆಲವರನ್ನು ಪೋಲಿಸರು ವಶಕ್ಕೆ ಪಡೆದು ಪ್ರತಿಭಟನೆಯನ್ನು ಚದುರಿಸಿದರು.
ನಗರ ಠಾಣೆಯ ಪೋಲಿಸರು ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದುರು.
ಚಿತ್ರ ೨೯ ಕೆ.ಎಲ್.ಆರ್. ೦೩ : ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಕುಂಬಾರ ಸಂಘದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೋಲಿಸರ ಮತ್ತು ಕುಂಬಾರ ಸಂಘದ ಮುಖಂಡರ ಮಧ್ಯೆ ವಾಗ್ವಾದ ನಡೆಯುತ್ತಿರುವುದು.