ಎನ್.ಆರ್.ಪುರ: ತಾಲೂಕಿನ ಸೀಗುವಾನಿಯ ಅನಾಥಾಶ್ರಮಕ್ಕೆ ಮುಂದಿನ ದಿನಗಳಲ್ಲಿ ಸಂಘ, ಸಂಸ್ಥೆಗಳಿಂದ ಹಾಗೂ ವೈಯಕ್ತಿಕವಾಗಿಯೂ ಇನ್ನಷ್ಟು ಸಹಾಯ ನೀಡಲಾಗುವುದು ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಮನು ತಿಳಿಸಿದರು.
ಶನಿವಾರ ಸೀಗುವಾನಿಯ ಎದೇನ್ ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಅನಾಥಾಶ್ರಮದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಅಕ್ಕಿ, ಬೇಳೆ, ತೆಂಗಿನಕಾಯಿ, ತರಕಾರಿಯ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಅನಾಥಾಶ್ರಮದಲ್ಲಿರುವವರು ನಮ್ಮ ಅಣ್ಣತಮ್ಮಂದಿರಂತೆ. ನೀವು ಅನಾಥರಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ. ಇದೊಂದು ಸಣ್ಣ ಸಹಾಯವಾಗಿದೆ ಎಂದರು.
ಅನಾಥಾಶ್ರಮದ ಮುಖ್ಯಸ್ಥ ಪಿ.ಲಿಜೇಸ್ ಮಾತನಾಡಿ, ಅನಾಥಾಶ್ರಮದಲ್ಲಿ 46 ಅನಾಥರಿದ್ದಾರೆ. ಜೇಸಿ ಸಂಸ್ಥೆ ಆಹಾರ ಕಿಟ್ ನೀಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ ಗೌಡ, ಕಾರ್ಯದರ್ಶಿ ಮಿಥುನ್ ಗೌಡ, ಕಾರ್ಯಕ್ರಮದ ಆಯೋಜಕ ಡಿ.ಆರ್.ಲಿಖಿತ್, ಜೇಸಿ ಸಪ್ತಾಹದ ಪ್ರಧಾನ ನಿರ್ದೇಶಕ ಜೋಯಿಬ್ರೋ, ಜೇಸಿ ಸದಸ್ಯರಾದ ಆದರ್ಶ, ಪವನಕರ್, ಪ್ರೀತಂ, ವಿನೂತಗೌಡ, ವಿನಯ, ಉದಯಗಿಲ್ಲಿ ಮತ್ತಿತರರಿದ್ದರು.