ನ್ಯೂಸ್

ಅಧಿಕಾರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಗಡುವು

ಚಿತ್ರದುರ್ಗ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಮಂಗಳವಾರ ನಗರದ ಎಪಿಎಂಸಿ ಕಚೇರಿ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿ ಪ್ರಗತಿ ಪರಿಶೀಲಿಸಿದರು. 2020 ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿರುವ ಈ ಕಾಮಗಾರಿ ನಿಗದಿತ ಅವಧಿಯೊಳ ಗೆ ಪೂರ್ಣಗೊಳ್ಳದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಂದಾಜು 20 ಕೋಟಿ ರೂ.ವೆಚ್ಚದ ಕಾಮಗಾರಿ ಪೂರ್ಣಗೊಂಡಿಲ್ಲ.

ಕನಿಷ್ಠ ಈ ತಿಂಗಳಾಂತ್ಯಕ್ಕೆ ಈ ಮೇಲು ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು,ಉಳಿದ ಬಾಕಿ ಕಾಮಗಾರಿಗಳನ್ನು ಒಂ ದು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪ್ರಗತಿಗೆ ಸಂಬಂಧಿಸಿದಂತೆ ರೈಲ್ವೆ,ಎಪಿಎಂಸಿ ವರ್ತಕರು ಹಾಗೂ ಸಂ ಬಂಧಿಸಿದ ಅಧಿಕಾರಿಗಳ ಸಭೆ ಕರೆದು ಕಾಮಗಾರಿ ತ್ವರಿತ ಪೂರ್ಣಕುರಿತು ಚರ್ಚಿಸುವುದಾಗಿ ಸಚಿವರು ತಿಳಿಸಿದರು. ಕಾಮಗಾರಿ ವೇಳೆ ಕೆಲ ದಿನಗಳ ಅಗತ್ಯವಿರುವ ಸಂಚಾರ ಬದಲಾವಣೆಗೆ ಸೂಕ್ತ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚಿಸಿದರು.

ನಗರದ ಹೃದಯ ಭಾಗ ಮೆದೇಹಳ್ಳಿ ರಸ್ತೆ ಅತ್ಯಂತ ವಾಹನ ದಟ್ಟಣೆ ಇರುವ ವಾಣಿಜ್ಯ ಪ್ರದೇಶವಾಗಿದೆ. ಖಾಸಗಿ ಬಸ್‌ನಿಲ್ದಾಣ,ನಾನಾ ಮಾರುಕಟ್ಟೆಗಳಿವೆ. ಎಪಿಎಂಸಿ ಆವರಣದ ಒಳಗೂ ವಾಹನಗಳು ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಮೆದೇಹಳ್ಳಿ ರಸ್ತೆ ಮೇಲಿನ ದಟ್ಟಣೆ ತಹ ಬದಿಯಲ್ಲಿತ್ತು. ಆದರೆ ಸೇತುವೆ ಕಾಮಗಾರಿ ಆರಂಭವಾದ ಬಳಿಕ ಮೆದೇಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರಗಳ ಒತ್ತಡ ಅಧಿಕವಾಗಿ ಟ್ರಾ ಫಿಕ್ ಸಮಸ್ಯೆ ಸಾಮಾನ್ಯವೆನಿಸಿದೆ.

ಬೆಳೆಗಳನ್ನು ಸರಾಗವಾಗಿ ಎಪಿಎಂಸಿಗೆ ತರಲು ರೈತರು ಹೈರಾಣ ಆಗುತ್ತಿದ್ದರೆ,ಕೃಷಿ ಉತ್ಪನ್ನಗಳ ಲೋ ಡ್,ಅನ್‌ಲೋಡ್‌ಗೆ ವರ್ತಕರು ಕೂಡ ಪರದಾಡುವಂತಾಗಿದೆ.

ರೈಲ್ವೆ ಆರ್‌ಒಬಿ 41 ಈ ಕಾಮಗಾರಿ ಪೂರ್ಣಗೊಂಡರೆ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ. ರೈಲ್ವೆ ಇಂಜಿನಿಯರ್‌ಗಳಾದ ನಿತ್ಯಾನಂದ,ವಿಜಯಕುಮಾರ್,ಮರ್ಜೆಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಲಕ್ಷ್ಮೀಕಾಂತ್‌ರೆಡ್ಡಿ,ವರ್ತಕರು,ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ,ಮೋಹನ್,ಸಂಪತ್ ಮತ್ತಿತರರು ಇದ್ದರು.