ನ್ಯೂಸ್

ಅಧಿಕಾರ ಪಡೆದು ಇತರರಿಗೆ ಮಾದರಿಯಾಗಿ

ಕೋಲಾರ: ಮೀಸಲಾತಿಯಡಿ ಅಧಿಕಾರ ಹೊಂದಿರುವ ಮಹಿಳೆಯರು ಸಂವಿಧಾನದ ಆಶಯದಂತೆ ಜವಾಬ್ದಾರಿ ನಿರ್ವಹಿಸುವ ಮೂಲಕ ಇತರರಿಗೆ ವಾದರಿ ಆಗಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಾತನಾಡಿ, ಮಹಿಳೆಯರಿಗೆ ಸಂವಿಧಾನದ ಆಶಯದಂತೆ ಗ್ರಾಪಂ, ತಾಪಂ, ಜಿಪಂಗಳಲ್ಲಿ ಶೇ.50 ಮೀಸಲಾತಿ ಕಲ್ಪಿಸಲಾಗಿದೆ, ವಿಧಾನಸಭೆ, ಲೋಕಸಭೆಯಲ್ಲೂ ಶೇ.33 ಮೀಸಲಾತಿಗೆ ಒತ್ತಾಯ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಜನಪರ ಆಡಳಿತ ನೀಡಲು ಬದ್ಧತೆ ತೋರಬೇಕು ಎಂದರು.

ಪ್ರತಿ ಕ್ಷೇತ್ರದಲ್ಲಿ ಪುರುಷರಿಗಷ್ಟೆ ಅಲ್ಲದೆ ಮಹಿಳೆಯರಿಗೂ ಸರಿ ಸಮನಾದ ಸ್ಥಾನವಾನ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಮಹಿಳೆಯರು ಸ್ವತಂತ್ರವಾಗಿ ಆಡಳಿತ ನಡೆಸದೆ ಪುರುಷರಿಗೆ ಅಧಿಕಾರದ ಜವಾಬ್ದಾರಿ ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಮಹಿಳೆಯರು ತಾವು ಪ್ರತಿನಿಧಿಸುವ ಸಂಗಳಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಗಟ್ಟಿತನ ಬೆಳೆಸಿಕೊಳ್ಳಬೇಕು, ಪುರುಷರಿಂದ ಸಲಹೆ, ಸಹಕಾರ ಪಡೆದರೆ ತಪ್ಪಲ್ಲ, ಆದರೆ ಆಡಳಿತ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳದಿದ್ದರೆ ಜನರು ನಿಮ್ಮನ್ನು ಸಂಶಯದಿಂದ ಕಾಣುತ್ತಾರೆ ಎಂದು ಎಚ್ಚರಿಸಿದರು.

ಹೆಣ್ಣು ಮಕ್ಕಳು ನೀಡಿದ ಸಹಕಾರದಿಂದ ಡಿಸಿಸಿ ಬ್ಯಾಂಕ್ ಪುನಶ್ಚೇತನ ಹೊಂದಲು ಸಾಧ್ಯವಾಯಿತು, ನೀವು ಬ್ಯಾಂಕಿನಲ್ಲಿ ಹೂಡಿದ ಠೇವಣಿಯಿಂದ ಬಡ ಹೆಣ್ಣು ಮಕ್ಕಳಿಗೆ ಸಾಲ ನೀಡುವ ಶಕ್ತಿ ಸಿಕ್ಕಿದೆ, ಠೇವಣಿ ಇಟ್ಟವರಿಗೆ ಸಾಲ ಸಿಗುವುದಿಲ್ಲವೆಂಬ ಅನುವಾನ ಬೇಡ, ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಈಗಾಗಲೆ ನೂರಾರು ಕೋಟಿ ರೂ. ಸಾಲ ನೀಡಲಾಗಿದ್ದು, ಮುಂದೆಯೂ ಅರ್ಹ ಮಹಿಳೆಯರಿಗೆ ಸಾಲ ನೀಡಲಾಗುವುದು ಎಂದರು.

ಇಡೀ ವಿಶ್ವದಲ್ಲಿ ಮಹಿಳೆಯರಿಗೆ ಸಿಗುವ ಗೌರವ, ವಾನ್ಯತೆ ಬೇರೆ ಯಾರಿಗೂ ಇಲ್ಲ, ಭಾರತದಲ್ಲಿ ಹೆಣ್ಣನ್ನು ಆದಿಪರಾಶಕ್ತಿ, ಭಾರತಾಂಬೆ ಎಂದು ಕರೆಯುತ್ತಾರೆ, ವಿಶ್ವದಲ್ಲಿ ಎಲ್ಲೂ ಪುರುಷ ದಿನ ಆಚರಿಸುವುದಿಲ್ಲ, ಮಹಿಳಾ ದಿನ ಆಚರಿಸಲು ಹೆಣ್ಣಿಗೆ ಇರುವ ಗೌರವ ಹಾಗೂ ಶಕ್ತಿ ಕಾರಣ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುವಾರ್ ವ್ಯಾಖ್ಯಾನಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ವಾತನಾಡಿ, ಕಳೆದ ವರ್ಷ ಮಹಿಳಾ ದಿನಾಚರಣೆ ಅಂಗವಾಗಿ ಕಿಸಾನ್ ಶ್ರೀಲಕ್ಷ್ಮೀ ಠೇವಣಿ ಬಾಂಡ್ ಯೋಜನೆ ಜಾರಿಗೆ ತರಲಾಗಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದರು.

ನಿರ್ದೇಶಕ ಕೆ.ವಿ.ದಯಾನಂದ್, ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್, ಮುದುವಾಡಿ ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷೆ ರಾಜಮ್ಮ, ಮುಖಂಡರಾದ ರಾಮಣ್ಣ, ಎಸ್.ವಿ.ಸುಧಾಕರ್, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್, ಶಿಕ್ಷಕಿ ಪ್ರಭಾವತಿ ಉಪಸ್ಥಿತರಿದ್ದರು.