ಯಾದಗಿರಿ: ತಾಲೂಕಿನ ಅಬ್ಬೆತುಮಕೂರಿನ ಶ್ರೀ ವಿಶ್ವ್ವಾರಾಧ್ಯರ ಕ್ಷೇತ್ರ ಕಳೆದ ಒಂದು ವಾರದಿಂದ ಅಕ್ಷರಶಃ ಭಕ್ತಿಯ ನೆಲವೀಡಾಗಿತ್ತು, ನಾಡಿನ ಮೂಲೆ ಮೂಲೆಗಳಿಂದ ಭಕ್ತರ ದಂಡು ಅಬ್ಬೆತುಮಕೂರಿನತ್ತ ನಿತ್ಯ ಹರಿದು ಬರುತ್ತಿತ್ತು. ಶುಕ್ರವಾರದಂದು ವಿಶ್ವಾರಾಧ್ಯರ ಭವ್ಯವಾದ ಮೂತರ್ಿ ಲೋಕಾರ್ಪಣೆಯೊಂದಿಗೆ ಅತಿರುದ್ರಯಾಗ ಸಂಪನ್ನಗೊಂಡಿತು.
ಮಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ವಿಶ್ವಾರಾಧ್ಯರ ಮೂತರ್ಿ ಪ್ರತಿಷ್ಠಾಪನಾ ಸಮಾರಂಭವನ್ನು ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ವಿಶಿಷ್ಟವಾದ ರೀತಿಯಲ್ಲಿ ಆಚರಿಸಿಕೊಂಡು ಬರುವ ಪರಂಪರೆಯನ್ನು ಇಟ್ಟುಕೊಂಡಿದ್ದಾರೆ. ಆ ಹಿನ್ನಲೆಯಲ್ಲಿ ಶ್ರೀಗಳ ಸಂಕಲ್ಪ ಮತ್ತು ಸದಿಚ್ಚೆಯಂತೆ ಈ ಬಾರಿ 108 ಗೋಮಂಗಲ ಪೂಜೆ, ಅತಿರುದ್ರಯಾಗ, ಅಷ್ಟಮಂಗಲ ಕುಬೇರ ಪೂಜೆ, 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭ ಇಡೀ ಒಂದು ವಾರದಿಂದ ಜರುಗಿ ಅಬ್ಬೆತುಮಕೂರು ಭಕ್ತಿಯ ಬೀಡಾಗುವಂತೆ ಮಾಡಿತ್ತು.
ದಿನಾಲು ಬೆಳಗ್ಗೆ 6 ಗಂಟೆಗೆ ಋತ್ವಿಜರಿಂದ ಭಕ್ತಿಯ ಪಾರಾಯಣ ಆರಂಭವಾಗುತ್ತಿತ್ತು. ಸೂಯರ್ೋದಯವಾಗುತ್ತಲೇ ಬಸ್ಸು, ಕಾರು, ಜೀಪು ಮುಂತಾದ ನೂರಾರು ವಾಹನಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಂದ ಶ್ರೀಮಠದ ಆವರಣ ಗಿಜಿಗುಡುತ್ತಿತ್ತು. ಶ್ವೇತವಸ್ತ್ರ ಧರಿಸಿದ, ಬಣ್ಣ ಬಣ್ಣದ ಸೀರೆಗಳನ್ನು ತೊಟ್ಟ ದಂಪತಿಗಳು ಪೂಜೆಯಲ್ಲಿ ಪಾಲ್ಗೊಳ್ಳುವ ಧಾವಂತದಲ್ಲಿರುತ್ತಿದ್ದರು. ನೂರಾರು ಸಂಖ್ಯೆಯ ಸ್ವಯಂ ಸೇವಕರು ಮತ್ತು ಪೊಲೀಸರು ಅಚ್ಚುಕಟ್ಟು ಮತ್ತು ಶಿಸ್ತಿನ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ದಾಸೋಹ ಮಹಾಮನೆಗಳಲ್ಲಿ ಭಕ್ತರಿಗಾಗಿ ಬಿಸಿಬಿಸಿಯಾದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಕಾರ್ಯ ಜೋರಾಗಿ ನಡೆಯುತ್ತಿತ್ತು. ಕೇರಳದಿಂದ ಕರೆಸಲಾಗಿರುವ ಚಂಡ, ಮದ್ದಳೆ ವಾದ್ಯದ ತಂಡದವರು ಮತ್ತು ಮಂತ್ರಾಲಯದಿಂದ ಕರೆಸಲಾಗಿರುವ ಕೊಂಬು ಕಹಳೆ ತಂಡದವರು ನುಡಿಸುತ್ತಿದ್ದ ಮಂಗಲವಾಧ್ಯಗಳ ಸದ್ದು ಜೋರಾಗಿರುತ್ತಿತ್ತು. ಆದರೆ ಶನಿವಾರ ಇದಾವ ದೃಶ್ಯಗಳು ಗೋಚರಿಸದೇ ಇಡಿ ಅಬ್ಬೆತುಮಕೂರಿನ ಮಠ ಶಾಂತವಾಗಿರುವಂತೆ ಕಂಡು ಬಂದಿತು.
ಶ್ರೀಮಠದ ಆವರಣದ ತುಂಬಾ ಹಾಕಲಾಗಿದ್ದ ಪೆಂಡಾಲ್ಗಳನ್ನು ತೆಗೆಯುವ ಕಾರ್ಯದಲ್ಲಿ ಕಾಮರ್ಿಕರು ತೊಡಗಿಸಿಕೊಂಡಿದ್ದರು. ದಾಸೋಹ ಮಹಾಮನೆಯ ಜತೆಗೆ ನಿಮರ್ಿಸಲಾಗಿದ್ದ, ಬಸ್ಸಮ್ಮ ತಾಯಿ ಮತ್ತು ನೀಲಮ್ಮ ತಾಯಿಯವರ ಎರಡು ದಾಸೋಹ ಮನೆಗಳನ್ನು ಹಾಗೂ ಆರೋಗ್ಯ ಇಲಾಖೆಯಿಂದ ಹಾಕಲಾಗಿದ್ದ ಆರೋಗ್ಯ ಘಟಕದ ಕೊಠಡಿಯನ್ನು ತೆರವುಗೊಳಿಸುತ್ತಿದ್ದರು.