ವಿಜಯಪುರ : ಇಲ್ಲಿನ ಕೀರ್ತಿ ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಶಮ್ಸ್ ಶಾಲೆಯಲ್ಲಿ ಮಂಗಳವಾರ ನಮ್ಮ ಅಡುಗೆ ನಮ್ಮ ಜವಾಬ್ದಾರಿ ಶೀರ್ಷಿಕೆಯಡಿ ಅಡುಗೆ ಅನಿಲ ಸುರಾ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ ನಡೆಯಿತು.
ನಗರದ ಇಂದಿರಾ ಭಾರತ ಗ್ಯಾಸ್ ವಿತರಕ ವಿಲಾಸ ವ್ಯಾಸ ಮತ್ತು ವಿಜಯಾಂಬ ಭಾರತ ಗ್ಯಾಸ್ ವಿತರಕರಾದ ಸಚಿನ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಭಾರತ ಗ್ಯಾಸ್ ಕಂಪನಿಯ ರಾಜ್ಯದ ವ್ಯಾಪಾರ ಅಧಿಕಾರಿ ಆಶೀಶ ಅಗರವಾಲ್ ಅಡುಗೆ ಅನಿಲ ಬಳಕೆಯ ಸುರತೆ ಕುರಿತು ಮಾತನಾಡಿ, ವಿತರಣೆ ಸಮಯದಲ್ಲಿ ಸಿಲಿಂಡರ್ ಪರೀಕ್ಷಿಸಿ ಪಡೆಯಬೇಕು.
ಸ್ಟೋವ್ ಅನ್ನು ಸಿಲಿಂಡರ್ಗಿಂತ ಎತ್ತರಕ್ಕೆ ಇಡುವುದು, ಅಡುಗೆ ನಂತರ ರೆಗ್ಯುಲೆಟರ್ ಬಂದ್ ಮಾಡುವುದು, ಲೀಕೆಜ್ ಬಗ್ಗೆ ಎಚ್ಚರಿಕೆ ಹಾಗೂ ಜಾಗೃತಿ ವಹಿಸುವುದು ಸೇರಿ ಮತ್ತಿತರರ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಕೊನೆಗೆ ಮಕ್ಕಳಿಗೆ ರಸಪ್ರಶ್ನೆ ನಡೆಸಿ, ಸರಿ ಉತ್ತರ ಕೊಟ್ಟ 15 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.