ರೀಕೆರೆ ಮಾಮ್ಕೋಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ನೂತನ ನಿರ್ದೇಶಕ ಟಿ.ಎಲ್.ರಮೇಶ್ ಷೇರುದಾರರಿಂದ ಸನ್ಮಾನ ಸ್ವೀಕರಿಸಿದರು. ಚಂದ್ರಪ್ಪ, ಟಿ.ಎಸ್.ಶಿವಮೂರ್ತಿ, ಕಿರಣ್‌ಕುಮಾರ್, ಪಿ.ಎಸ್.ನಂಜುಂಡಸ್ವಾಮಿ, ಬಿ.ಎನ್.ಚಿದಾನಂದ್, ಎಲ್.ಎಸ್.ಪ್ರದೀಪ್‌ಕುಮಾರ್ ಇತರರಿದ್ದರು. 
ನ್ಯೂಸ್

ಅಡಕೆ ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದನೆ

ತರೀಕೆರೆ: ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿರುವ ಮ್ಯಾಮ್ಕೋಸ್ 30 ಸಾವಿರಕ್ಕೂ ಅಧಿಕ ಷೇರುದಾರರನ್ನು ಹೊಂದಿದೆ ಎಂದು ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್ ತಿಳಿಸಿದರು.

ಪಟ್ಟಣದ ಮಾಮ್ಕೋಸ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಷೇರುದಾರರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮೃತ ಷೇರುದಾರರ ಕುಟುಂಬ ಸದಸ್ಯರಿಗೆ ಅಂತ್ಯಸಂಸ್ಕಾರದ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.

ಸಹಕಾರ ಭಾರತಿ 2005ನೇ ಸಾಲಿನಿಂದಲೂ ಮ್ಯಾಮ್ಕೋಸ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಾರಿಯ ಚುನಾವಣೆಯಲ್ಲೂ ಸಹಕಾರ ಭಾರತಿಯ 19 ಸ್ಪರ್ಧಿಗಳು ಜಯಭೇರಿ ಬಾರಿಸುವ ಮೂಲಕ ವಿಜಯಯಾತ್ರೆ ಮುಂದುವರಿಸಿದ್ದು, ಮತ್ತೊಂದು ಅವಧಿಗೆ ಆಡಳಿತ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಮೃತ ಷೇರುದಾರರ 2 ಕುಟುಂಬ ಸದಸ್ಯರಿಗೆ ತಲಾ 5 ಸಾವಿರ ರೂ.ಗಳ ಅಂತ್ಯಸಂಸ್ಕಾರದ ಸಹಾಯಧನದ ಚೆಕ್ ವಿತರಿಸಲಾಗಿದ್ದು ಮುಂದೆ ಅಡಕೆ ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸಲಾಗುವುದು. ಅಲ್ಲದೆ ಸಮಗ್ರ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ತರೀಕೆರೆ ಶಾಖೆ ಮ್ಯಾಮ್ಕೋಸ್ ವ್ಯವಸ್ಥಾಪಕ ಎಲ್.ಎಸ್.ಪ್ರದೀಪ್‌ಕುಮಾರ್, ಷೇರುದಾರರಾದ ಚಂದ್ರಪ್ಪ, ಬೈಲಪ್ಪ, ಪಿ.ಎಸ್.ನಂಜುಂಡಸ್ವಾಮಿ, ಸಿ.ಆರ್.ಮಲ್ಲಪ್ಪ, ಟಿ.ಎನ್.ಲೋಕೇಶ್, ಕಿರಣ್‌ಕುಮಾರ್, ಟಿ.ಎಸ್.ಶಿವಮೂರ್ತಿ, ಬಿ.ಎನ್.ಚಿದಾನಂದ್ ಮತ್ತಿತರರಿದ್ದರು.