ಅಟಲ್ ಬಿಹಾರಿ ವಾಜಪೇಯಿ ಒಡನಾಟದಲ್ಲಿದ್ದ ಸಂಘ ಪರಿವಾರದ ಮುಖಂಡ ಎನ್.ಆರ್.ಪುರದ ಎಚ್.ಎಸ್.ಕೃಷ್ಣಮೂರ್ತಿ ಅವರನ್ನು ಅಭಿನಂದಿಸಲಾಯಿತು. ವಿ.ನೀಲೇಶ್, ಎನ್.ಎಂ.ಕಾಂತರಾಜ್, ಬಿ.ಎಸ್.ಆಶೀಶ್‌ಕುಮಾರ್, ವೈ.ಎಸ್.ರವಿ, ರಶ್ಮಿ ದಯಾನಂದ್, ಜಯಶ್ರೀ ಮೋಹನ ಇದ್ದರು. 
ನ್ಯೂಸ್

ಅಟಲ್ ಬಿಹಾರಿ ವಾಜಪೇಯಿ ಅಜಾತ ಶತ್ರು

ಎನ್.ಆರ್.ಪುರ: ಅಟಲ್‌ಬಿಹಾರಿ ವಾಜಪೇಯಿ ಅವರು ಅಜಾತ ಶತ್ರುವಾಗಿದ್ದರು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ತಿಳಿಸಿದರು.

ವಾಜಪೇಯಿ ಜನ್ಮ ಶತಮಾನೋತ್ಸವ ಅಭಿಯಾನದ ಹಿನ್ನೆಲೆಯಲ್ಲಿ ಅಟಲ್ ಒಡನಾಡಿ, ಅಂಚೆ ಕಚೇರಿ ರಸ್ತೆಯಲ್ಲಿರುವ ಸಂಘ ಪರಿವಾರದ ಮುಖಂಡ ಎಚ್.ಎಸ್.ಕೃಷ್ಣಮೂರ್ತಿ ಅವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶದ ಕೈಗಾರಿಕೆ ಅಭಿವೃದ್ಧಿಪಡಿಸಲಿಕ್ಕಾಗಿ ರಸ್ತೆ ಪ್ರಗತಿಗೆ ಹೆಚ್ಚು ಮಹತ್ವ ನೀಡಿದ್ದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಿದ್ದರು. ವಾಜಪೇಯಿ ಅವರು ಕವಿ ಹೃದಯದ ಸಂಸದೀಯ ಪಟುವಾಗಿದ್ದರು ಎಂದರು.

ಬಿಜೆಪಿ ನಗರ ಅಧ್ಯಕ್ಷ ಸುರಭಿ ರಾಜೇಂದ್ರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆಶೀಶ್‌ಕುಮಾರ್, ತಾಲೂಕು ಮಾಜಿ ಅಧ್ಯಕ್ಷ ಅರುಣಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸುವಿ ಮಂಜುನಾಥ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ಮುಖಂಡರಾದ ಜಯಶ್ರೀ ಮೋಹನ್, ವೈ.ಎಸ್.ರವಿ ಇದ್ದರು.