ದಕ್ಷಿಣ ವಲಯ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸುಬ್ರಹ್ಮಣ್ಯ ಜೀವಾಂಶ್, ರುತ್ವಾ ಮತ್ತು ಕೃತಿಕ್ ಒಟ್ಟು 7 ಪದಕ ಪಡೆದು, ಮೈಸೂರಿನ ಕೀರ್ತಿ ಬೆಳಗಿದ್ದಾರೆ.
ಆಂಧ್ರಪ್ರದೇಶ ಅಮೆಚೂರ್ ಅಕ್ವಾಟಿಕ್ ಅಸೋಸಿಯೇಷನ್ ವತಿಯಿಂದ ವಿಜಯವಾಡದಲ್ಲಿ ಇತ್ತೀಚೆಗೆ ನಡೆದ 35ನೇ ದಕ್ಷಿಣ ವಲಯ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್ 2024ರಲ್ಲಿ ಮೈಸೂರಿನ ಜೆ.ಪಿ.ನಗರದ ಜಿಎಸ್‌ಎ ತಂಡದ ಸುಬ್ರಹ್ಮಣ್ಯ ಜೀವಾಂಶ್ 2ಚಿನ್ನ ಹಾಗೂ 1ಬೆಳ್ಳಿ, ರುತ್ವಾ 3 ಬೆಳ್ಳಿ ಮತ್ತು ಕೃತಿಕ್ 1ಕಂಚಿನ ಪದಕ ಪಡೆದಿದ್ದಾರೆ.
ಜೆ.ಪಿ.ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಮುಖ್ಯತರಬೇತುದಾರ ಪವನ್ ಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿರುವ ಸುಬ್ರಹ್ಮಣ್ಯ ಜೀವಾಂಶ್ 200 ಮೀ. ಬಟರ್‌ಫ್ಲೈ ಹಾಗೂ 4*100 ಮೀ. ಬಟರ್ ಫ್ಲೈ ರಿಲೇಯಲ್ಲಿ 2 ಚಿನ್ನದ ಪದಕ ಹಾಗೂ 1500ಮೀ. ಫ್ರೀ ಸ್ಟೈಲ್ ನಲ್ಲಿ ಒಂದು ಬೆಳ್ಳಿ ಪದಕ ಪಡೆದಿದ್ದಾರೆ. ರುತ್ವಾ 50 ಮೀ. ಬಟರ್ ಫ್ಲೈ, 4*50ಮೀ. ಫ್ರೀ ಸ್ಟೈಲ್ ರಿಲೇ ಹಾಗೂ 4*50 ಮೀ. ಮೆಡ್ಲೆ ರಿಲೇಯಲ್ಲಿ 3 ಬೆಳ್ಳಿ ಪದಕ ಪಡೆದಿದ್ದು, ಕೃತಿಕ್ 100 ಮೀ. ಬಟರ್‌ಫ್ಲೈನಲ್ಲಿ ಕಂಚಿನ ಪದಕ ಪಡೆದಿದ್ದಾರೆ.