2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ದಿನಾಂಕ:22-09-2025 ರಿಂದ 07-10-2025ರವರೆಗೆ ಹಮ್ಮಿಕೊಂಡಿದ್ದು, ಸದರಿ ಸಮೀಕ್ಷಾ/ಗಣತಿ ಕಾರ್ಯವನ್ನು ಅಕ್ಟೋಬರ್ 18 ರ ವರೆಗೆ ವಿಸ್ತರಿಸಲಾಗಿರುತ್ತದೆ. ಮೈಸೂರು ಜಿಲ್ಲೆಯಲ್ಲಿ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ಗಣತಿದಾರರು ನಿಮ್ಮ ಮನೆಗಳಿಗೆ ಬರುವ ಪ್ರಯುಕ್ತ ಸಾರ್ವಜನಿಕರು ಈ ಗಣತಿ ಕಾರ್ಯಕ್ಕೆ ಸಂಪೂರ್ಣವಾಗಿ ಸಹಕಾರ ನೀಡಬೇಕಾಗಿದೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ಒಂದು ವೇಳೆ ಗಣತಿದಾರರು ತಮ್ಮ ಕುಟುಂಬದ ಸಮೀಕ್ಷೆಯನ್ನು ಕೈ ಬಿಟ್ಟಿದ್ದಲ್ಲಿ, ಮೈಸೂರು ನಗರ ವ್ಯಾಪ್ತಿಯ ನಾಗರೀಕರು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು/ಅಧಿಕಾರಿಗಳು/ವಲಯ ಆಯುಕ್ತರು/ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಿ ಗಣತಿಯ ಮಾಹಿತಿಯನ್ನು ನೀಡಬಹುದಾಗಿದೆ.