ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಹಂಗಾಮಿ ಕುಲಪತಿಯಾಗಿ ನೇಮಕಗೊಂಡ ಪ್ರೊ. ನಾಮದೇವ ಗೌಡ ಅವರಿಗೆ ಈ ಹಿಂದಿನ ಹಂಗಾಮಿ ಕುಲಪತಿಯಾಗಿದ್ದ ಪ್ರೊ.ಓಂಕಾರ ಕಾಕಡೆ ಅವರು ಅಧಿಕಾರ ಹಸ್ತಾಂತರಿಸಿದರು. ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ ಇತರರಿದ್ದಾರೆ.  
ನ್ಯೂಸ್

ಅಕ್ಕಮಹಾದೇವಿ ವಿವಿ ಹಂಗಾಮಿ ಕುಲಪತಿಯಾಗಿ ಪ್ರೊ.ನಾಮದೇವಗೌಡ ನೇಮಕ

ವಿಜಯಪುರ : ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಹಂಗಾಮಿ ಕುಲಪತಿಯಾಗಿ ಕಲಾ ನಿಕಾಯದ ಡೀನ್ ಪ್ರೊ.ನಾಮದೇವ ಗೌಡ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಸೋಮವಾರ ಬೆಳಗ್ಗೆ ನೂತನ ಹಂಗಾಮಿ ಕುಲಪತಿ ಪ್ರೊ.ನಾಮದೇವಗೌಡ ಅವರಿಗೆ ಹಿಂದಿನ ಹಂಗಾಮಿ ಕುಲಪತಿಯಾಗಿದ್ದ ಪ್ರೊ.ಓಂಕಾರ ಕಾಕಡೆ ಅವರು ಅಧಿಕಾರ ಹಸ್ತಾಂತರಿಸಿದರು. ಪ್ರೊ.ನಾಮದೇವಗೌಡ ಅವರ ಅಧಿಕಾರದ ಅವಧಿ ಜ.31ರ ವರೆಗೆ ಇರುತ್ತದೆ ಎಂದು ರಾಜ್ಯಪಾಲರು ಆದೇಶದಲ್ಲಿ ತಿಳಿಸಲಾಗಿದೆ.
ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ. ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.