ಪ್ರತಿಭಟನಕಾರರು ಆಸ್ಪತ್ರೆ ಮುಂಭಾಗದಲ್ಲಿ ಕಛೇರಿಗೆ ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿ ಗಳು ನಡುವೆ ಚರ್ಚೆ. ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸರಗೂರು ಶಿವಣ್ಣ.ಖಜಾಂಚಿ ಗ್ರಾಮಿಣ ಮಹೇಶ್.ಕರ್ನಾಟಕ ಭೀಮ ಸೇನೆ ಅಧ್ಯಕ್ಷ ಹೂವಿನಕೊಳ ಮಹೇಂದ್ರ.ಉಪಾಧ್ಯಕ್ಷ ದಯಾನಂದ ಲಂಕೆ.ಶಿವರಾಜು ಲಂಕೆ.ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಕೂಡಗಿ ಗೊವಿಂದರಾಜು.ಹೋರಾಟಗಾರ ಸರಗೂರುಕೃಷ್ಣ.ಇದ್ದರು 
ನ್ಯೂಸ್

ಅಂಬೇಡ್ಕರ್‌ಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಸರಗೂರು: ಸರಗೂರು ತಾಲೂಕಿನ ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಸ್ವಾತಂತ್ರೃ ದಿನಾಚರಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರನ್ನು ಕೆಲಸದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆ ಮುಖಂಡರು ಬುಧವಾರ ಆಗ್ರಹಿಸಿದರು.


ಬುಧವಾರ ಆಸ್ಪತ್ರೆಗೆ ಬಂದ ಸಂಘಟನೆಯ ಮುಖಂಡರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಂಬಂಧಪಟ್ಟವರಿಗೆ ದೂರಿದರು. ಈ ವೇಳೆ ಮಾತನಾಡಿದ ಡಾ.ಡೇವಿಸ್ ಚಹಾಲ್, ಸ್ವಾತಂತ್ರೃ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡಬೇಕಿತ್ತು. ಆದರೆ ಲೋಪವಾಗಿದೆ. ಈ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಭೀಮ ಸೇನೆ ಸರಗೂರು ತಾಲೂಕು ಅಧ್ಯಕ್ಷ ಮಹೇಂದ್ರ ಹೂವಿನಕೊಳ, ಉಪಾಧ್ಯಕ್ಷ ದಯಾನಂದ ಲಂಕೆ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸರಗೂರು ಶಿವಣ್ಣ, ಖಜಾಂಚಿ ಮಹೇಶ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೊವಿಂದರಾಜು ಇತರರು ಇದ್ದರು.