ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಗಾಂಧಿನಗರ ಬಡಾವಣೆಯಲ್ಲಿ ಏ.13 ಮತ್ತು 14ರಂದು ಭೀಮೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಶರತ್ ಸತೀಶ್ ತಿಳಿಸಿದರು.
ಇಡೀ ಗಾಂಧಿನಗರ ಬಡಾವಣೆಯಲ್ಲಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಏ.13ರಂದು ಸಂಜೆ 6 ಗಂಟೆಗೆ ಚಾಲನೆ ನೀಡಲಾಗುತ್ತದೆ. ಗೌತಮ ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಎರಡು ದೊಡ್ಡ ಕಟೌಟ್ಗಳನ್ನು ಅಳವಡಿಸಲಾಗುವುದು. ಬಡಾವಣೆಯ ಬಸ್ ತಂಗುದಾಣದ ಮೈದಾನದಲ್ಲಿ ಧ್ವನಿ ಮತ್ತು ಬೆಳಕು ಲೇಸರ್ ಶೋ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧಮೆ ಕುರಿತಾಗಿ ಚಿತ್ರ ಪ್ರದರ್ಶನ ಮಾಡಲಾಗುತ್ತದೆ. ಸದರಿ ಕಾರ್ಯಕ್ರಮವನ್ನು ಸಂಸದ ಸುನೀಲ್ ಬೋಸ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಟಿ.ಎಸ್.ಶ್ರೀವತ್ಸ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏ.14ರಂದು ಮಧ್ಯಾಹ್ನ 12.30ಕ್ಕೆ ಭೀಮೋತ್ಸವದ ಅದ್ದೂರಿ ಮೆರವಣಿಗೆ ಆರಂಭಗೊಳ್ಳಲಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕರಾದ ದರ್ಶನ್ ಧ್ರವನಾರಾಯಣ, ಟಿ.ಎಸ್.ಶ್ರೀವತ್ಸ, ಡಿಸಿಪಿ ಕೆ.ಎಸ್.ಸುಂದರ್ ರಾಜ್, ಪತ್ರಕರ್ತ ಚೀ.ಜ.ರಾಜೀವ, ಎಸ್.ಸಿ., ಎಸ್.ಟಿ.ಉದ್ದಿಮೆದಾರರ ಸಂಘದ ಆರ್.ಮಂಜುನಾಥ್ ಭಾಗವಹಿಸಲಿದ್ದಾರೆ. ಮೆರವಣಿಗೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ತನ್ವೀರ್‌ಸೇಠ್, ನಗರ ಪಾಲಿಕೆ ಮಾಜಿ ಸದಸ್ಯೆ ಡಾ.ಅಶ್ವಿನಿ ಶರತ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಮಹಾಸಭಾದ ಅಧ್ಯಕ್ಷ ಪುಟ್ಟರಂಗಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ದೇವರಾಜು, ಪದಾಧಿಕಾರಿಗಳಾದ ಪರಮಾನಂದ, ಪ್ರೀತಮ್, ಚರಣ್ ಇದ್ದರು.