ನ್ಯೂಸ್

ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ವತಿಯಿಂದ ನಡೆಯುತ್ತಿರುವ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ಮೈಸೂರು ಇಲ್ಲಿ ಅಂಧ ಮಕ್ಕಳಿಗೆ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು 2 ವರ್ಷಗಳ ವಿಶೇಷ ಡಿ.ಎಡ್ ತರಬೇತಿಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ.

 ಈ ವಿಶೇಷ D.Edಸಾಮಾನ್ಯ D.Ed ಗೆ ಸಮಾನಾಂತರವಾಗಿವೆ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 50% (ಎಸ್.ಸಿ, ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45%) ಅಂಕಗಳೊoದಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಜುಲೈ 12 ರೊಳಗೆ ವೆಬ್‌ಸೈಟ್ https://nber-rehabcouncil.gov.in/ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 ತರಬೇತಿ ಕಾರ್ಯಕ್ರಮಗಳು: D.Ed.Spl.Ed(VI)- Helen Keller Govt. Teachers Training Centre for Visually Handicapped - KK016, D.Ed.Spl.Ed(HI)  Govt. Teachers Training Centre for Hearing Handicapped - KK015 ಈ ತರಬೇತಿ ಕಾರ್ಯಕ್ರಮಗಳು ರೆಗ್ಯೂಲರ್ ಆಗಿರುವುದರಿಂದ ವಿಕಲಚೇತನರು ಸೇರಿದಂತೆ ಸಾಮಾನ್ಯ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ.

 ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು(ತರಬೇತಿ) ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ಸರ್ಕಾರಿ ತರಬೇತಿ ಕೇಂದ್ರ ಪುಲಿಕೇಶಿ ರಸ್ತೆ, ತಿಲಕ್‌ನಗರ, ಮೈಸೂರು ರವರ ಕಛೇರಿ ದೂ.ಸಂ: 0821- 2491600 ತರಬೇತಿ ಸಂಯೋಜಕರಾದ ಆಶಾ ವಿ. ಹಿರೇಮಠ್ ಅವರ ದೂ.ಸಂ: 9113561620 ಟಿ.ಡಿ. ಮಂಜುನಾಥ ಅವರ ದೂ.ಸಂ: 9686762378ನ್ನು ಸಂಪರ್ಕಿಸಬಹುದು ಎಂದು ಮೈಸೂರು ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.