ನ್ಯೂಸ್

ಅಂತರ್ಜಲ ವೃದ್ಧಿಗೆ ಜಿಲ್ಲೆಯ ಕೆರೆಗಳ ಮರುಪೂರ್ಣ / ಜಿಲ್ಲಾಧಿಕಾರಿ ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರಿನ ಮೂಲಕ ಅಂತರ್ಜಲ ವೃದ್ಧಿಯಾಗುತ್ತಿದ್ದು, ಅದರ ಭಾಗವಾಗಿ ತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಯೋಜನೆಯಾಗಿದ್ದು, ನೀರನ್ನು ಮತ್ತಷ್ಟು ಶುದ್ಧೀಕರಿಸಿ ಈ ಯೋಜನೆ ಉತ್ತಮವಾಗಿ ರೂಪುಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ನಡೆದ ಜೀವಜಲ ೩೨೩೨ರ ಯೋಜನೆಯ ಅನುಷ್ಠಾನ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ೩೨೩೨ ಕೆರೆಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ೩೨೩೨ ಎಂಬ ಯೋಜನೆಯ ಮೂಲಕ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ಕೆರೆಗಳನ್ನು ಮೂರು ಹಂತಗಳಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಎಲ್ಲಾ ಕೆರೆಗಳನ್ನು ಸರ್ವೇ ಮಾಡಿಬೇಕಿದ್ದು, ಶೇ.೫೦ ರಷ್ಟು ಪೂರ್ಣಗೊಂಡಿದೆ. ಒತ್ತುವರಿಯನ್ನು ಸರ್ವೇ ಮಾಡುವ ಸಮಯದಲ್ಲಿ ತೆರೆವುಗೊಳಿಸಿದ ನಂತರ ಬೇಲಿ ಹಾಕಿ ಸಂಬAಧಪಟ್ಟ ಇಲಾಖೆಗಳಿಗೆ ವಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಕೆರೆಗಳನ್ನು ತೆರೆವುಗೊಳಿಸಿದ ನಂತರ ನೀರನ್ನು ಸಂಗ್ರಹಿಸುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಕೆ.ಸಿ ವ್ಯಾಲಿ ನೀರು ಮತ್ತು ಮಳೆ ನೀರಿನ ಮೂಲಕ ಕೆರೆಗಳನ್ನು ತುಂಬಿಸಿ ನಂತರ ಕೆರೆಗಳನ್ನು ಕಂಪನಿಗಳಿಗೆ ದತ್ತು ನೀಡಿ ಕ್ರೀಡಾ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕೆಲವು ಕೆರೆಗಳಿಗೆ ನೀರು ತುಂಬಿಸಲು ಮೂಲಗಳನ್ನು ಹುಡುಕಿಕೊಂಡು ನಂತರ ಕೆರೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಮಾಡಲು ಮತ್ತಷ್ಟು ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದರು.

ನಗರೀಕರಣದಿಂದ ಕೆರೆಗಳ ಒತ್ತುವರಿ ಹೆಚ್ಚಾಗಿದ್ದು, ಶೀಘ್ರವೇ ತೆರೆವುಗೊಳಿಸಿ ಏ.ಐ ತಂತ್ರಜ್ಞಾನ ಬಳಸಿಕೊಂಡು ಕೆರೆಗಳ ನಡುವಿನ ದಾರಿಯನ್ನು ಸುಗಮಗೊಳಿಸಿಕೊಳ್ಳಬೇಕು. ಸ್ಥಳೀಯ ಕೆರೆ ಪ್ರಂಗಾಣಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿವೃತ್ತ ಐ.ಎ.ಎಸ್ ಅಧಿಕಾರಿ ಎನ್.ಟಿ.ಅಬ್ರು, ಪ್ರೊಫೆಸರ್ ಇನಾಯತುಲ್ಲ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ, ಲೋಕಪಯೋಗಿ ಇಲಾಖೆ ಅಮರಪ್ಪ ಮುಂತಾದವರು ಇದ್ದರು.

ಚಿತ್ರ ೦೫ ಕೆ.ಎಲ್.ಆರ್. ೦೭ : ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜೀವಜಲ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ನಿವೃತ್ತ ಪಿಎಸ್‌ಐ ಅಧಿಕಾರಿ ಎನ್.ಟಿ.ಅಬ್ರು ಮುಂತಾದವರು ಇದ್ದರು.