ಮನುಷ್ಯನು ಸುಳ್ಳನ್ನೇ ಹೇಳುತ್ತಲಿದ್ದರೆ ಕೊನೆಗೊಮ್ಮೆ ದೇವರ ಬಳಿ ಆತನನ್ನು ಪರಮ ಸುಳ್ಳುಗಾರ ಎಂದು ಬರೆದಿಡಲಾಗುತ್ತದೆ. ಇಸ್ಲಾಮೀ ನೀತಿ ಶಾಸ್ತ್ರದಲ್ಲಿ ಪ್ರಾಮಾಣಿಕತೆಗೆ ವಿಶೇಷ ಮಹತ್ವವಿದೆ. ಸತ್ಯವು ಸಚ್ಚಾರಿತ್ರ್ಯದ ತಳಹದಿ. ಯಾವಾಗಲೂ ಸತ್ಯವನ್ನೇ ಹೇಳುವವನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿಯೇ ಇರುತ್ತಾನೆ. ಇದರ ಪರಿಣಾಮವಾಗಿ ಅವನ ಚಾರಿತ್ರ್ಯವು ಸಂಪನ್ನವಾಗುತ್ತದೆ. ಸತ್ಯವನ್ನು ಗುಣವಾಗಿ ಮಾಡಿಕೊಂಡವನು ದಿವ್ಯ ಮಾರ್ಗದರ್ಶನದಿಂದ ಹೇಗೆ ತಾನೇ ದೂರವಿರಬಲ್ಲನು? ಎನ್ನುತ್ತಿದ್ದರು. ಸತ್ಯವಂತಿಕೆಯು ಮಾನವನನ್ನು ಸನ್ಮಾರ್ಗದೆಡೆಗೆ ಒಯ್ಯುತ್ತದೆ. ಸನ್ಮಾರ್ಗವು ಸ್ವರ್ಗಕ್ಕೆ ಒಯ್ಯುತ್ತದೆ, ಮನುಷ್ಯರ ಮೇಲೆ ಕರುಣೆ ತೋರದ ವ್ಯಕ್ತಿಯ ಮೇಲೆ ದೇವರು ಕರುಣೆ ತೋರಿಸುವುದಿಲ್ಲ.
ಯಾವುದೇ ದೇಶದ, ಯಾವುದೇ ವರ್ಗದ ಜನರಿರಲಿ ಅವರೊಡನೆ ಕರುಣೆ ಮತ್ತು ವಾತ್ಸಲ್ಯದೊಂದಿಗೆ ವತಿರ್ಸಬೇಕು ಎಂಬುದು ಇಲ್ಲಿನ ಅಂತರಾರ್ಥವಾಗಿದೆ. ಜನರೊಡನೆ ಕ್ರೂರವಾಗಿ ವತಿರ್ಸುವ ವ್ಯಕ್ತಿಗಳು ಆ ಮೂಲಕ ತಾವು ದೇವನ ಕರುಣೆ ಮತ್ತು ಅನುಗ್ರಹಕ್ಕೆ ಪಾತ್ರರಾಗಲು ಅರ್ಹರಲ್ಲವೆಂದು ತೋರಿಸಿಕೊಟ್ಟಂತಾಗುವುದು. ಕರುಣೆಯಿಂದ ವಂಚಿತನಾಗಿರುವ ವ್ಯಕ್ತಿ ಒಳಿತಿನಿಂದಲೇ ವಂಚಿತನಾಗುತ್ತಾನೆ. ಕರುಣೆಯಿಲ್ಲದ ವ್ಯಕ್ತಿ ಮಾನವಕುಲದ ಪಾಲಿಗೆ ಹಾನಿಕಾರಕನಾಗುತ್ತಾನೆ.
ಆದ್ದರಿಂದ ಪರಲೋಕದಲ್ಲಿ ಅವನು ಅತ್ಯಂತ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುವುದು. ""ಶ್ರೀಮಂತಿಕೆ ಎಂಬುದು ಸಂಪತ್ತು ಮತ್ತು ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ. ಖರೀದಿ ಮಾಡುವ, ಮಾರಾಟ ಮಾಡುವ ಮತ್ತು (ಸಾಲವನ್ನು) ಮರಳಿಸಲು ಕೇಳುವ ವಿಷಯದಲ್ಲಿ ಔದಾರ್ಯ ಪಾಲಿಸುವವನ ಮೇಲೆ ಅಲ್ಲಾಹನು ಕರುಣೆ ತೋರಲಿ' ಎಂಬುದು ಪೈಗಂಬರರ ಕೋರಿಕೆಯಾಗಿದೆ.