ತೆಲಸಂಗ: ಅಂಗನವಾಡಿ ಕೇಂದ್ರಗಳು ಬಡ ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುವ ಸ್ಥಳ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಗ್ರಾಮದಲ್ಲಿ ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕೆ ಹೊಸ ಆಯಾಮ ನೀಡುತ್ತವೆ. ಇವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಜನರ ಜೀವನ ಮಟ್ಟ ಸುಧಾರಣೆಗೆ ರಾಜಕಾರಣ ಇರಬೇಕೇ ಹೊರತು ಅಭಿವೃದ್ಧಿ ಕಾರ್ಯಗಳಲ್ಲೂ ಸ್ವಾರ್ಥಕ್ಕಾಗಿ ಟೀಕಿಸುವ ರಾಜಕಾರಣ ಸರಿಯಲ್ಲ. ಲಕ್ಷ್ಮಣ ಸವದಿ ಅವರು ರಾಜಕಾರಣವನ್ನು ಜನಪರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.
ಮಾಜಿ ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಡಾ.ಆರ್.ಡಿ.ಪೂಜಾರಿ, ಕಾಶಿಲಿಂಗ ಲೋಕಂಡೆ, ರಾಜು ಫರ್ನಾಕರ್, ಧರೀಯಪ್ಪ ಮಾಳಿ, ರಾಜು ಖ್ಯಾಡಿ ಇತರರಿದ್ದರು.