ನ್ಯೂಸ್

ತಾ.ಪಂ, ಜಿ.ಪಂ. ಚುನಾವಣೆ; ಸೀಮಾ ನಿರ್ಣಯ ಆಯೋಗದಿಂದ ಒಂದು ತಿಂಗಳ ಒಳಗೆ ವರದಿ ಸಲ್ಲಿಕೆ

ಬೆಂಗಳೂರು: ಹೊಸ ಸರ್ಕಾರ ರಚನೆ ಬೆನ್ನಲ್ಲೇ ಮೊತ್ತೊಂದು ಮಹಾ ಮತಯುದ್ಧ ಸನ್ನಿತದ ಲಕ್ಷಣಗಳು ಗೋಚರಿಸುತ್ತಿವೆ. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸ್ಥಗಿತವಾಗಿದ್ದ ಗ್ರಾಮೀಣ ಸ್ಥಳೀಯ ಆಡಳಿತಕ್ಕೆ ಜೀವ ಬರಲಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಣಿಯಾಗಬೇಕಿದೆ.

ಕ್ಷೇತ್ರ ಹಾಗೂ ಸೀಮೆ ನಿರ್ಣಯ ಮಾಡಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಆಕ್ಷೇಪಣೆ ಆಹ್ವಾನಿಸಿದೆ. ಸೆ.19 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಬಳಿಕ ಆಯೋಗ ಆಕ್ಷೇಪಣೆಗಳನ್ನು ಪರಿಶೀಲಿಸಿ ತೀರ್ಮಾನ ಪ್ರಕಟಿಸಲಿದೆ.

35 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಹಾಗೂ 12,500 ಜನಸಂಖ್ಯೆಗೆ ಒಂದು ತಾಲೂಕು ಪಂಚಾಯಿತಿ ಕ್ಷೇತ್ರ ರಚನೆ ಮಾಡಿದ್ದು, ಒಟ್ಟು 3451 ತಾಲೂಕು ಪಂಚಾಯಿತಿ, 1118 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಅಧ್ಯಕ್ಷರು ಎಂ.ಆರ್.ಕಾಂಬ್ಳೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.