-ಸರ್ಕಾರನರೇಗಾ ಬಿಲ್ ನೀಡದಿರುವುದು ಸಮಸ್ಯೆ ಗೆ ಮೂಲ ಕಾರಣ
ಬೆಳಗಾವಿ: ನರೇಗಾ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಜಿಪಂ,ತಾಪಂ, ಗ್ರಾಪಂ ಅಧಿಕಾರಿಗಳು ಕಾಮಗಾರಿ ಬಾಕಿ ಬಿಲ್ ನೀಡುತ್ತಿಲ್ಲ ಎಂದು ಆರೋಪಿಸಿ ಶುಕ್ರವಾರ ಗುತ್ತಿಗೆದಾರ ಕುಟುಂಬ್ ಸದಸ್ಯರು ವಿಷದ ಬಾಟಿಲು ಹಿಡಿದು ಪ್ರತಿಭಟನೆ ನಡೆಸಿದರು.
ಹುಕ್ಕೇರಿ ತಾಲೂಕಿನ ಕಣಕುಂಬಿ ಗ್ರಾಮದ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ 2018ರಲ್ಲಿ ಮಾಡಿದ ಕಾಮಗಾರಿ ಬಿಲ್ ಮಂಜೂರು ಮಾಡಲು ಲಕ್ಷಾಂತರ ರೂ. ಲಂಚವನ್ನು ಪಿಡಿಒಗೆ ನೀಡಿದ್ದೇನೆ. ಆದರೆ ಬಿಲ್ ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳಿಗೆ ಲಂಚ ಕೊಟ್ಟರೂ ಬಿಲ್ ನೀಡುತ್ತಿಲ್ಲ ಎಂದು ಗುತ್ತಿಗೆದಾರ ಜಯಪ್ರಕಾಶ ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದಾಗಿ ಹುಕ್ಕೇರಿ ತಾಪಂ ಸಭೆಯಲ್ಲಿ ಬಿಲ್ ನೀಡುವಂತೆ ಪಿಡಿಒಗೆ ಸೂಚಿಸಿದ್ದರು. ಆದರೆ ಮತ್ತೆ ಕಮಿಷನ್ ಕೊಡುವಂತೆ ಸತಾಯಿಸುತ್ತಿದ್ದಾನೆ ಎಂದು ದೂರಿದರು.
ವಿವಿಧ ಕಾಮಗಾರಿ ಮಾಡಿದ 19 ಲಕ್ಷ ಬಿಲ್ ಕೊಡದೆ ಇದ್ದರೆ ನಮ್ಮ ಕುಟುಂಬದ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ. ಮನೆ, ಆಸ್ತಿ ಮಾರಾಟ ಮಾಡಿದ್ದೇನೆ. ಸಾಲಗಾರರು ಮನೆಗೆ ಬರುತ್ತಿದ್ದಾರೆ. ಅವರಿಗೆ ಹೇದರಿ ತಲೆ ಮರೆಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.