ತಾವರಗೇರಾ ಸಮೀಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ನಡೆಸಲು ಪೂರ್ವಭಾವಿ ಸಭೆ ನಡೆಯಿತು. ಮುಖ್ಯಶಿಕ್ಷಕ ವೀರಭದ್ರಯ್ಯ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕರಾದ ಪರಸಪ್ಪ ಹೊಸಮನಿ, ಗವಿಸಿದ್ದಪ್ಪ ನಾಗಲಿಕರ್, ಸಂಗಮೇಶ್, ವೆಂಕಟೇಶ ತಂಬ್ರಹಳ್ಳಿ ಇತರರಿದ್ದರು.  
ನ್ಯೂಸ್

ವಲಯಮಟ್ಟದ ಕ್ರೀಡಾಕೂಟ ನಾಡಿದ್ದು

ತಾವರಗೇರಾ: ವಲಯ ಮಟ್ಟದ ಹಿ.ಪ್ರಾ.ಶಾಲೆಗಳ ಕ್ರೀಡಾಕೂಟವನ್ನು ಪಟ್ಟಣ ಸಮೀಪದ ಮುರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಸೆ.9ರಂದು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿದೆ ಎಂದು ವಸತಿ ಶಾಲೆಯ ಪ್ರಾಚಾರ್ಯ ಕೊಟ್ರೇಶ್ ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ಪಂಚಾಯಿತಿ ಮಟ್ಟದಲ್ಲಿ ವಿಜಯಶಾಲಿಯಾದ ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು ಮತ್ತು ಗುರುತಿನ ಪತ್ರದೊಂದಿಗೆ ಸಕಾಲಕ್ಕೆ ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಮುಖ್ಯಶಿಕ್ಷಕ ವೀರಭದ್ರಯ್ಯ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕರಾದ ಪರಸಪ್ಪ ಹೊಸಮನಿ, ಗವಿಸಿದ್ದಪ್ಪ ನಾಗಲಿಕರ್, ಸಂಗಮೇಶ್, ವೆಂಕಟೇಶ ತಂಬ್ರಹಳ್ಳಿ, ಪ್ರಮುಖರಾದ ಬಸವರಾಜ್ ಅಂಗಡಿ ಇತರರಿದ್ದರು.