ಮನರಂಜನೆ ನೀಡುವ ವಿಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜೀ ಸಂಸ್ಥೆ ಮತ್ತೊಂದು ಹೊಸ ಚಾನೆಲ್ ಅನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಜೀ ಕನ್ನಡದ ಎಲ್ಲಾ ಧಾರಾವಾಹಿಗಳಿಂದ ಹಿಡಿದು ರಿಯಾಲಿಟಿ ಶೋವರೆಗೂ ತನ್ನ ವೀಕ್ಷಕರನ್ನು ರಂಜಿಸುತ್ತಲೇ ಮುಂದೆ ಸಾಗಿದೆ. ಜೀ಼ ಕನ್ನಡದ ದೊಡ್ಡ ಮಟ್ಟಿನ ಯಶಸ್ಸಿನ ಬಳಿಕ 'ಜೀ಼ ಪವರ್'ಮೂಲಕ ಕನ್ನಡಿಗರಿಗೆ ಹೊಸ ಪ್ರಕಾರದಲ್ಲಿ ಮನರಂಜನೆ ನೀಡುವುದಕ್ಕೆ ಹೊರಟಿದೆ.
ಜೀ ಪವರ್ ಇದೇ ಆಗಸ್ಟ್ 23, 2025, ನಾಳೆಯಿಂದ ಪ್ರಸಾರವಾಗಲಿದೆ. "ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜ ಜೀವನ ಹಾಗೂ ಕರುನಾಡಿನ ಸಂಸ್ಕೃತಿ ಬೆಸೆಯುವ ವಾಹಿನಿ" ಎಂದು ಸಂಸ್ಥೆ ಹೇಳಿಕೊಂಡಿದೆ. ಸಮಾಜವನ್ನು ತಲುಪುವ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಸಿನಿಮಾಗಳು ಸೇರಿದಂತೆ ಹಬ್ಬದ ಮತ್ತು ವಿಶೇಷ ಕಾರ್ಯಕ್ರಮಗಳೊಂದಿಗೆ ಜೀ಼ ಪವರ್ ಯುವ ಪೀಳಿಗೆಯನ್ನು
ಸಿಜು ಪ್ರಭಾಕರನ್, ಸೌತ್ ಅಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್, ZEEL, ಮಾತನಾಡಿ, ಈ ವಾಹಿನಿಯ ಮೂಲಕ ಎಲ್ಲ ವಯಸ್ಕರಿಗೂ ತಲುಪುವಂತಹ ಕಥೆಯನ್ನು ನೀಡಲಿದ್ದೇವೆ" ಎಂದರು.
ಕನ್ನಡದ ಮೊದಲ ಹೈಬ್ರಿಡ್ ಚಾನೆಲ್ ಝೀ ಪವರ್ ನಲ್ಲಿ, ನಾಲ್ಕು ಧಾರಾವಾಹಿಗಳಾದ ರಾಜ ಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ ಮತ್ತು ಗೌರಿ, ಒಂದು ರಿಯಾಲಿಟಿ ಶೋ - ಹಳ್ಳಿ ಪವರ್ ಮತ್ತು ಭಕ್ತಿ ಕಾರ್ಯಕ್ರಮ-ಭವಿಷ್ಯ ದರ್ಶನ ಸೇರಿದಂತೆ ಅತ್ಯಾಕರ್ಷಕ ಕಾರ್ಯಕ್ರಮ ಗಳು ಇರಲಿವೆ. ಜೀ ಪವರ್ ಅಂತಲೇ ಹೆಸರು ಇಡುವುದಕ್ಕೆ ಕಾರಣವಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಹೊಸ ಚಾನೆಲ್‌ಗೆ ಪವರ್ ಎಂದು ಹೆಸರು ಇಡಲಾಗಿದೆ ಎಂದು ಜೀ ಸಂಸ್ಥೆಯ ಮುಖ್ಯಸ್ಥರು ಇದೇ ವೇದಿಕೆಯಲ್ಲಿ ಹೇಳಿದ್ದಾರೆ.
ಜೀ ಪವರ್ ನಲ್ಲಿ, ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ, ಗೌರಿ, ಒಂದು ರಿಯಾಲಿಟಿ ಶೋ ʼಹಳ್ಳಿ ಪವರ್ʼ ಸೇರಿದಂತೆ ಆರ‍್ಷಕ ಕರ‍್ಯಕ್ರಮಗಳು ಪ್ರಸಾರ ಆಗಲಿವೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25ರಿಂದ ಶುರು ಆಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ ನಾಳೆ ಪ್ರಸಾರವಾಗಲಿದೆ.
ಯಾವೆಲ್ಲಾ ಕಾರ್ಯಕ್ರಮಗಳು ಪ್ರಸಾರವಾಗಲಿವೆ?
ಜೀ ಪವರ್ ನಲ್ಲಿ, ರಾಜಕುಮಾರಿ, ಶುಭಸ್ಯ ಶೀಘ್ರಂ, ಜೋಡಿ ಹಕ್ಕಿ, ಗೌರಿ, ಒಂದು ರಿಯಾಲಿಟಿ ಶೋ ʼಹಳ್ಳಿ ಪವರ್ʼ ಸೇರಿದಂತೆ ಆರ‍್ಷಕ ಕರ‍್ಯಕ್ರಮಗಳು ಪ್ರಸಾರ ಆಗಲಿವೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25ರಿಂದ ಶುರು ಆಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ 23 ರಿಂದ ಪ್ರಸಾರ ಆಗಲಿದೆ.
ಸಿಟಿ ಜೀವನಕ್ಕೆ ಹೊಂದಿಕೊಳ್ಳುವ ಧೈರ್ಯಶಾಲಿ ಹಳ್ಳಿ ಹುಡುಗಿಯ ಕಥೆ ರಾಜಕುಮಾರಿ ಧಾರವಾಹಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ರಾತ್ರಿ 8.30 ಕ್ಕೆ ಪ್ರಸಾರವಾಗುವ ಶುಭಸ್ಯ ಶೀಘ್ರಂ, ತನ್ನ ನಾಲ್ವರು ಹೆಣ್ಣುಮಕ್ಕಳು ಉತ್ತಮವಾದ ಮನೆಗೆ ಸೊಸೆಯಾಗಿ ಹೋಗಲಿ ಎಂದು ಬಯಸುವ ತಾಯಿಯ ಕುರಿತಾದ ಕೌಟುಂಬಿಕ ಧಾರಾವಾಹಿಯಾಗಿದೆ. ವಿದ್ಯೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಜೋಡಿಹಕ್ಕಿ ಧಾರವಾಹಿ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.