ನ್ಯೂಸ್

ಬಳ್ಳಾರಿ ಜೈಲಲ್ಲಿ ನಟ ದರ್ಶನ್: 'ದಾಸ'ನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸಚಿವ ಜಮೀರ್​ ಅಹ್ಮದ್​

ಹಾವೇರಿ: ಇಂದು ಹಾವೇರಿಯಲ್ಲಿ ಮಾತನಾಡಿದ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಜಮೀರ್ ಅಹ್ಮದ್ ಖಾನ್, ವಕ್ಫ್​ ಆಸ್ತಿ ವಿಚಾರದಲ್ಲಿ ಬಹಳಷ್ಟು ಸಮಸ್ಯೆಯಿದೆ. ಹೀಗಾಗಿ ಹಾವೇರಿಯಲ್ಲಿ ವಕ್ಫ್​ ಅದಾಲತ್ ಹಮ್ಮಿಕೊಂಡಿದ್ದೇವೆ ಎಂದರು.

ಇನ್ನು ವಿವಿ ಕುಲಸಚಿವ ಹಾಗೂ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ದಿನೇಶ್ ಕುಮಾರ್ ವರ್ಗಾವಣೆ ಮೊದಲೇ ಮಾಡಲಾಗಿತ್ತು. ರಾಜ್ಯಪಾಲರು ಸಸ್ಪೆಂಡ್ ಮಾಡಿದ್ದಾರೆ ಅಂತ ಮಾದ್ಯಮದವರು ಹೇಳುತ್ತಿದ್ದಾರೆ. ಅದರ ಬಗ್ಗೆ ನನಗೆ ಗೊತ್ತಿಲ್ಲ" ಎಂದು ತಿಳಿಸಿದರು.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬದಲಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್​, "ನಾನು ದರ್ಶನ್ ಮೊದಲಿನಿಂದಲೂ ಆತ್ಮೀಯ ಸ್ನೇಹಿತರು.

ಆದರೆ, ದರ್ಶನ್ ತಪ್ಪು ಮಾಡಿದ ಕಾರಣಕ್ಕೆ ಜೈಲಿಗೆ ಹೋಗಿದ್ದಾರೆಯೇ ಹೊರತು ಸುಮ್ಮನೇ ಹೋಗಿಲ್ಲ. ಯಾರಾದರೂ ಸುಮ್ಮನೆ ಜೈಲಿಗೆ ಹೋಗುತ್ತಾರಾ ನೀವೇ ಹೇಳಿ" ಎಂದು ಮಾಧ್ಯಮದವರಿಗೆ ಪ್ರಶ್ನಿಸಿದ್ದಾರೆ.